

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾದ ಬೆನ್ನಲ್ಲೇ ಬೆಡ್ ಬ್ಲಾಕಿಂಗ್ ದಂಧೆ ಕೂಡ ಆರಂಭವಾಗಿದೆ. ಈ ವಿಚಾರವಾಗಿ ಅನೇಕ ನಾಯಕರು ಧ್ವನಿ ಎತ್ತಿದ್ದಾರೆ. ಇದೀಗ ಈ ಸಂಬಂಧ ಲೋಕಾಯುಕ್ತ ಇಲಾಖೆಯು ಸುಮೋಟೋ ಕೇಸ್ ದಾಖಲಿಸಿಕೊಂಡಿದೆ.
ಬೆಂಗಳೂರಿನಲ್ಲಿ ಕೃತಕವಾಗಿ ಬೆಡ್ ಕೊರತೆ ಸೃಷ್ಟಿಸಲಾಗಿದೆ. ಈ ಬಗ್ಗೆ ಸಾಕಷ್ಟು ದಿನಪತ್ರಿಕೆಗಳು ಹಾಗೂ ವಿದ್ಯುನ್ಮಾನ ಮಾಧ್ಯಮಗಳು ವರದಿ ಮಾಡಿವೆ. ಈ ವರದಿ ಆಧರಿಸಿ ಲೋಕಾಯುಕ್ತ ಇಲಾಖೆ ಸುಮೋಟೋ ಕೇಸ್ ದಾಖಲಿಸಿಕೊಂಡಿದೆ. ಪ್ರಕರಣ ಸಂಬಂಧ 31 ಹಿರಿಯ ಅಧಿಕಾರಿಗಳಿಗೆ ನೊಟೀಸ್ ನೀಡಲಾಗಿದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಬಿಬಿಎಂಪಿ ಮುಖ್ಯ ಆಯುಕ್ತ, ಆರೋಗ್ಯ ಇಲಾಖೆ ಆಯುಕ್ತರು ಸೇರಿ 31 ಮಂದಿಗೆ ನೊಟೀಸ್ ಜಾರಿ ಮಾಡಲಾಗಿದೆ. ನೊಟೀಸ್ಗೆ ಉತ್ತರಿಸಲು ಮೂರು ವಾರಗಳ ಗಡುವು ಕೊಡಲಾಗಿದೆ. ಅವರೆಲ್ಲರು ಲೋಕಾಯುಕ್ತ ಎಡಿಜಿಪಿಗೆ ಮೂರುವಾರದೊಳಗಾಗಿ ವರದಿ ನೀಡಬೇಕು ಬೇಕು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಆದೇಶ ಹೊರಡಿಸಿದ್ದಾರೆ.