ಬಿಜಿನೆಸ್, ಎಐ ತಂತ್ರಜ್ಞಾನ ಅವಶ್ಯಕ: ಪಾಲಿಜ್ಞಾನ್ ಸಂಸ್ಥೆ ಸಿಇಒ ಚಂದನ್ ಶಿವಾನಂದ್ ಅಭಿಮತ

Summer workshop Mandya
Published on

ಮಂಡ್ಯ: ಪ್ರಸ್ತುತ ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ಬಿಜಿನೆಸ್ ಮತ್ತು ಎಐ ತಂತ್ರಜ್ಞಾನ ಅವಶ್ಯಕವಿದೆ ಎಂದು ಪಾಲಿಜ್ಞಾನ್ ಸಂಸ್ಥೆ ಸಿಇಒ ಚಂದನ್ ಶಿವಾನಂದ್ ಹೇಳಿದರು.

ನಗರದ ಸೇವಾಕಿರಣ ಸಭಾಂಗಣದಲ್ಲಿ ಪಾಲಿಜ್ಞಾನ್ ಸಂಸ್ಥೆ ಮತ್ತು ದಿಶಾ ೌಂಡೇಷನ್‌ನಿಂದ ಆಯೋಜಿಸಿದ್ದ ಉದ್ಯಮಶೀಲತೆ ಕೌಶಲ ಮತ್ತು ಉದ್ಯಮಿದಾರ ಕುರಿತ ಬೇಸಿಗೆ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಶಿಕ್ಷಣ ಮತ್ತು ಉದ್ಯಮ ಕ್ಷೇತ್ರದಲ್ಲಿ ಕೌಶಲ ಜ್ಞಾನ ಅವಶ್ಯಕವಿದೆ. ಶಾಲಾ ಶಿಕ್ಷಣ ಪಠ್ಯಪುಸ್ತಕಕ್ಕೆ ಸೀಮಿತವಾಗದೆ ಜೀವನ ಕೌಶಲ ಹಾಗೂ ಸಮಗ್ರ ಬೆಳೆವಣಿಗೆಗೆ ನಾಂದಿಯಾಗಬೇಕು ಎಂಬ ಆಲೋಚನೆಯಲ್ಲಿ ಅನೇಕ ಕಾರ್ಯಕ್ರಮಗಳು ಸಂಸ್ಥೆ ಕೈಗೊಂಡಿದೆ ಎಂದರು.

ಪಾಲಿಜ್ಞಾನ್ ಸಂಸ್ಥೆಯ ಪ್ರಜ್ಞಲ್ ರಾಜೇಂದ್ರಪ್ರಸಾದ್, ಸೇವಾಕಿರಣ ವೃದ್ದಾಶ್ರಮದ ಕಾರ್ಯದರ್ಶಿ ಜಿ.ವಿ.ನಾಗರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net