ಬೇಸಿಗೆ ಶಿಬಿರಗಳಿಂದ ಸೃಜನಶೀಲತೆ ಹೆಚ್ಚಳ

ಅಳವಂಡಿ ಸಮೀಪದ ವದಗನಾಳ ಗ್ರಾಮದಲ್ಲಿ ಶ್ರೀ ಹಮ್ಮಿಗೇಶ್ವರ ಸೇವಾ ಸಮಿತಿಯಿಂದ ಹಮ್ಮಿಕೊಂಡಿದ್ದ ಉಚಿತ ಬೇಸಿಗೆ ತರಬೇತಿ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಪ್ರೌಢಶಾಲೆ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸೋಮಶೇಖರ ಗೌಡ ಹರ್ತಿ ಮಾತನಾಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶರಣ ಬಸವಗೌಡ ಪಾಟೀಲ, ಸಮಿತಿಯ ಅಧ್ಯಕ್ಷ ಬಸವನಗೌಡ ಗೊಂದಿಹೊಸಳ್ಳಿ, ಎಸ್‌ಡಿಎಂಸಿ ಅಧ್ಯಕ್ಷ ಗವಿಸಿದ್ದಪ್ಪ ಬೆದವಟ್ಟಿ ಇತರರಿದ್ದರು.

Published on

ಅಳವಂಡಿ: ಬೇಸಿಗೆ ತರಬೇತಿ ಶಿಬಿರದಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಹೆಚ್ಚಲಿದೆ. ಸೇವಾ ಸಮಿತಿಯವರ ಕಾರ್ಯ ಶ್ಲಾಘನೀಯ ಎಂದು ಪ್ರೌಢಶಾಲೆ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸೋಮಶೇಖರ ಗೌಡ ಹರ್ತಿ ಹೇಳಿದರು.

ಸಮೀಪದ ವದಗನಾಳ ಗ್ರಾಮದಲ್ಲಿ ಶ್ರೀ ಹಮ್ಮಿಗೇಶ್ವರ ಸೇವಾ ಸಮಿತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಉಚಿತ ಬೇಸಿಗೆ ತರಬೇತಿ ಶಿಬಿರ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂಥ ಕಾರ್ಯಕ್ರಮವನ್ನು ಗ್ರಾಮೀಣ ಪ್ರದೇಶದಲ್ಲಿ ಆಯೋಜಿಸುವುದು ಸುಲಭದ ಕೆಲಸವಲ್ಲ. ವಿದ್ಯಾರ್ಥಿಗಳು ಯಾವ ರೀತಿ ಶಿಕ್ಷಣ ಪಡೆದುಕೊಳ್ಳಬೇಕು ಎಂಬುವುದನ್ನು ಮನವರಿಕೆ ಮಾಡಿ ಕೊಳ್ಳಬೇಕು. ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶದೊಂದಿಗೆ ಶಾಲೆಗೆ ಹಾಗೂ ಊರಿಗೆ ಕೀರ್ತಿ ತಂದರೆ ತರಬೇತಿ ಶಿಬಿರ ಸಾರ್ಥಕವಾಗಲಿದೆ ಎಂದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಶೇ.60 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಪ್ರಮುಖರಾದ ಎಲ್.ಪಿ.ಪರನಗೌಡ್ರು, ಉದ್ಯಮಿ ವೆಂಕಟೇಶ ಬಾರ್ಕೆರ, ಪಿ.ಎಚ್.ನೂರ್ ಬಾಷಾ, ವೀರೇಶ ಸಜ್ಜನ, ಶಿವಪ್ಪ ಶಹಾಪುರ, ಮಹಾಂತೇಶಗೌಡ ಪಾಟೀಲ್, ದೇವೇಂದ್ರ ಗೌಡ ಜಿರ್ಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net