ಬೇಸಿಗೆ ಶಿಬಿರ ಮಕ್ಕಳಿಗೆ ಪ್ರೋತ್ಸಾಹದಾಯಕ ವೇದಿಕೆ

17 Dwd 7
Published on

ಧಾರವಾಡ: ಸ್ಪರ್ಧಾತ್ಮಕ ಯುಗದಲ್ಲಿ ಬೇಸಿಗೆ ಶಿಬಿರಗಳು ಮಕ್ಕಳಿಗೆ ಪ್ರೋತ್ಸಾಹದಾಯಕ ವೇದಿಕೆಗಳು ಎಂದು ವನಿತಾ ಸೇವಾ ಸಮಾಜದ ಕಾರ್ಯದರ್ಶಿ ಮಧುರಾ ಹೆಗಡೆ ಹೇಳಿದರು.
ನಗರದ ಹೊಂಬೆಳಕು ಪ್ರತಿಷ್ಠಾನ ಹಾಗೂ ಪೂರ್ಣರಂಗ ಧಾರವಾಡದ ಸಹಯೋಗದೊಂದಿಗೆ ಆಯೋಜಿಸಿದ್ದ ಮಕ್ಕಳ ಬೇಸಿಗೆ ಶಿಬಿರ `ಚಿಣ್ಣರ ವಸಂತ ಸಂಭ್ರಮ ೨' ಉದ್ಘಾಟಿಸಿ ಅವರು ಮಾತನಾಡಿದರು.
ವನಿತಾ ಸೇವಾ ಸಮಾಜ ಪ್ರಾಥಮಿಕ ಶಾಲೆ ಮುಖ್ಯಾಧ್ಯಾಪಕ ಎಂ.ಬಿ. ಬಿರಾದಾರ ಮಾತನಾಡಿ, ಶಿಬಿರಗಳು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸಹಾಯಕಾರಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಸಾಯಿ ಪದವಿ ಪೂರ್ವ ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಶಿಬಿರದ ಆಯೋಜಕಿ ಡಾ. ವೀಣಾ ಬಿರಾದಾರ ಮಾತನಾಡಿ, ಮಕ್ಕಳು ರಂಗಭೂಮಿ ಕಲೆ ಬೆಳೆಸಿಕೊಳ್ಳುವ, ಕರಗತ ಮÁಡಿಕೊಳ್ಳುವ ಉದ್ದೇಶದಿಂದ ತರಬೇತಿ ನೀಡಲಾಗುತ್ತಿದೆ ಎಂದರು.
ಶಿಬಿರದ ನಿರ್ದೇಶಕ ವಿಠ್ಠಲ್ ರಾಜ, ಸಂಚಾಲಕಿ ಪೂರ್ಣಿಮಾ ಹಾಗೂ ಮಕ್ಕಳು, ಪಾಲಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net