

ಹುಬ್ಬಳ್ಳಿ : ಪ್ರತಿಯೊಂದು ಮಗುವಿನಲ್ಲೂ ಪ್ರತಿಭೆ ಇದೆ. ಬೇಸಿಗೆ ರಜೆ ತರಬೇತಿ ಶಿಬಿರಗಳಲ್ಲಿ ಅಂಥ ಪ್ರತಿಭೆಗೆ ಸಾಣೆ ಹಿಡಿಯುವ ಕೆಲಸ ಆಗುವುದು ಎಂದು ಕಲಾವಿದ ರಾಜೇಶ ಬಾದಾಮಿ ಹೇಳಿದರು.
ಇಲ್ಲಿಯ ಅಭಿನಯ ಲೋಕ ಸಂಸ್ಥೆ ಏರ್ಪಡಿಸಿರುವ ಅಭಿನಯ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.
ಕಲಾವಿದರಾಗಿ ತರಬೇತಿ ಪಡೆದವರು ಭವಿಷ್ಯದಲ್ಲಿ ಪ್ರಸಿದ್ಧ ಕಲಾಕಾರರಾಗಿ ಹೆಸರು ಪಡೆಯುವರು. ರಂಗಭೂಮಿಯಲ್ಲಿ ಉತ್ತಮ ಕಲಾವಿದರಾಗಿ ಗುರುತಿಸಿಕೊಂಡರೆ ಮಕ್ಕಳಿಗೆ ಉತ್ತಮ ಭವಿಷ್ಯವಿದೆ. ಕಲಾವಿದರಾಗುವ ಛಲ ಬೇಕು. ಅದನ್ನು ಅಭ್ಯಾಸದಿಂದ ಸಾಧಿಸಬೇಕು ಎಂದು ಸಲಹೆ ನೀಡಿದರು.
ನಾಟಕ ಶಿಬಿರಗಳಲ್ಲಿ ಭಾಗವಹಿಸುವುದರಿಂದ ಮಕ್ಕಳಲ್ಲಿ ಧೆರ್ಯ ಹೆಚ್ಚಾಗುವುದು. ಮಾತನಾಡುವ ಕಲೆ ಸಿದ್ಧಿಸುವುದು ಎಂದು ಮತ್ತೊಬ್ಬ ಕಲಾವಿದ ಗವೀಶ್ ಮಂಗಳೂರು ಹೇಳಿದರು.
ಕಲಾವಿದ ಭೋಜರಾಜ ಮಾತನಾಡಿದರು. ಎನ್ಎಲ್ಇ ಸೊಸೆಟಿ ಸದಸ್ಯ ಗುರುರಾಜ ಕೌಜಲಗಿ, ರಂಗಕಮಿರ್ ಕ್ಕೀರೇಶ ಬಡಿಗೇರ ಅವರು ಕಲಾವಿದರನ್ನು ಸತ್ಕರಿಸಿದರು.
ವಸ್ತ್ರ ವಿನ್ಯಾಸಕ ಗಿರೀಶ ಕುಲಕಣಿರ್, ಸಂಗೀತ ಸಂಯೋಜಕ ಮಂಜು ಇಂಗಳಳ್ಳಿ, ಮುಖ್ಯೋಪಾಧ್ಯಾಯರಾದ ಸೌಮ್ಯ ಪ್ರಭು, ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ, ಸಂಟಕ ಅರ ಕುಲಕಣಿರ್ ಉಪಸ್ಥಿತರಿದ್ದರು. ಶಿಬಿರದ ನಿರ್ದೇಶಕ ವಿಶ್ವನಾಥ ಕುಲಕಣಿರ್ ಸ್ವಾಗತಿಸಿ, ನಿರೂಪಿಸಿದರು.