ದುದ್ದದಲ್ಲಿ ಬೇಸಿಗೆ ಶಿಬಿರ ಸಮಾರೋಪ: ಗಮನಸೆಳೆದ ಹತ್ತು ದಿನದ ಚಟುವಟಿಕೆ

1 (3)
Published on

ಮಂಡ್ಯ: ತಾಲೂಕಿನ ದುದ್ದ ಗ್ರಾಮದಲ್ಲಿ ಆಯೋಜಿಸಿದ್ದ ಬೇಸಿಗೆ ಶಿಬಿರ ಸಮಾರೋಪಗೊಂಡಿತು. ಅಂತೆಯೇ 10 ದಿನ ನಡೆದ ಚಟುವಟಿಕೆಗಳು ವಿದ್ಯಾರ್ಥಿಗಳ ಮೆಚ್ಚುಗೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು.

ದುದ್ದ ಗ್ರಾಮ ಪಂಚಾಯಿತಿಯ ಡಿಜಿಟಲ್ ಗ್ರಂಥಾಲಯದಲ್ಲಿ ಆಯೋಜಿಸಿದ್ದ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳು ಶಿಬಿರದ ಅನುಭವ ಹಂಚಿಕೊಂಡರು. ಭಾಗವಹಿಸಿದ್ದ ಎಲ್ಲ ಮಕ್ಕಳಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು. ಅಂತೆಯೇ ಕಲಾವಿದರಿಗೆ ಪ್ರಶಂಸನಾ ಪತ್ರ ನೀಡಲಾಯಿತು. 10ನೇ ತರಗತಿ ವಿದ್ಯಾರ್ಥಿ ಕೆ.ವೈ.ಯಶ್ವಂತ್ ಸ್ವಾಗತ ಕೋರಿದರೆ, ಪೂರ್ವಿಕ ಮತ್ತು ತಂಡವರು ಪ್ರಾರ್ಥನೆ ಸಲ್ಲಿಸಿದರು.

ದುದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಗ್ಯಮ್ಮ, ಪಿಡಿಒ ಶಿವಲಿಂಗೇಗೌಡ, ಗ್ರಂಥಪಾಲಕ ರಮೇಶ್, ಡಿಇಒ ರತ್ನಮ್ಮ, ಕಲಾವಿದ ಯಶ್ವಂತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net