ಮಕ್ಕಳಿಗೆ ಬೇಸಿಗೆ ಶಿಬಿರ ಅತ್ಯಂತ ಉತ್ತಮ ವೇದಿಕೆ

h27-santosh vernekar
Published on

ಹುಬ್ಬಳ್ಳಿ: ಕಲ್ಕಿ ಎಜುಕೇಷನ್ ಆ್ಯಂಡ್ ಡೆವಲಪ್ಮೆಂಟ್ ಸೊಸೈಟಿ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ ಹುಬ್ಬಳ್ಳಿ ನಗರ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭವು ನಗರದ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಜರುಗಿತು.
ಈಶ್ವರಿ ಪೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಸಂತೋಷ ವೇರ್ಣೆಕರ ಉದ್ಘಾಟಿಸಿ ಮಾತನಾಡಿ, ಮಕ್ಕಳು ಮೊಬೈಲ್ ಫೋನ್ ಮತ್ತು ಟಿವಿಯಿಂದ ದೂರವಿರಬೇಕು. ಮಕ್ಕಳಿಗೆ ಬೇಸಿಗೆ ಶಿಬಿರ ಅತ್ಯಂತ ಉತ್ತಮ ವೇದಿಕೆ. ಕತೆ, ಕವನ, ನೃತ್ಯ, ಚಿತ್ರ ಕಲೆ, ಹಾಡುವುದು, ಸೃಜನಾತ್ಮಕ ಚಟುವಟಿಕೆಗಳಲ್ಲಿ ಮಕ್ಕಳ ವಿಕಾಸಕ್ಕೆ ಸಹಕಾರಿ ಆಗಲಿದೆ ಎಂದರು. ಅಲ್ಲದೇ ನಮ್ಮ ಫೌಂಡೇಷನ್‌ನಿಂದ ದೊರಕಬೇಕಾದ
ಸೌಲಭ್ಯ ಕಲ್ಪಿಸವ ಭರವಸೆ ನೀಡಿದರು. ಶಿಬಿರದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದಿಸುವ ಮುಖಾಂತರ ಪ್ರಮಾಣಪತ್ರ ನೀಡಲಾಯಿತು.
ಪ್ರಮುಖರಾದ ಕಿರಣ ಶೆಟ್ಟರ, ನೀಲಾಂಬಿಕ ಶೆಟ್ಟರ, ರವೀಂದ್ರನಾಥ ದಂಡಿನ, ಎಲ್.ಐ. ಲಕ್ಕಮ್ಮನವರ, ಗುರು ತಿಗಡಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net