ಕೊಕ್ಕಡದಲ್ಲಿ ಚಿಣ್ಣರ ಸಂಭ್ರಮ ಸಂಪನ್ನ: ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

jci programme
ಹತ್ತನೇ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ತ್ರಿಷಾ ಶೆಟ್ಟಿ ಅವರನ್ನು ಜೆಸಿಐ ಕೊಕ್ಕಡ ಕಪಿಲಾ ಘಟಕದ ವತಿಯಿಂದ ಸನ್ಮಾನಿಸಲಾಯಿತು. ಟಿ.ಎಸ್ ನಿತ್ಯಾನಂದ ರೈ, ಹರೀಶ್ ರಾವ್ ಕಾಯಡ, ರಂಜಿತ್ ಮೊದಲಾದವರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಕೊಕ್ಕಡ

ಜೆಸಿಐ ಕೊಕ್ಕಡ ಕಪಿಲಾ ಘಟಕ ಮತ್ತು ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನ ನೇತೃತ್ವದಲ್ಲಿ ದೇವಳದ ವಠಾರದಲ್ಲಿ ಎರಡು ದಿನಗಳ ಚಿಣ್ಣರ ಬೇಸಿಗೆ ಶಿಬಿರ ನಡೆಯಿತು.

ಶಿಬಿರದಲ್ಲಿ ಒಟ್ಟು 39 ಮಕ್ಕಳು ಭಾಗವಹಿದ್ದು, ಸಂಪನ್ಮೂಲ ವ್ಯಕ್ತಿಗಳಾಗಿ ಚಂಪಾ ಜೈನ್, ಗಂಗಾಧರ ಭಂಡಾರಿ, ರಾಜಾರಾಂ, ಚೇತನಾಕ್ಷಿ ಭಾಗವಹಿಸಿದ್ದರು. ಜತೆಗೆ ಜೆಸಿಐ ಪ್ರಮುಖರಾದ ಜೆಸಿಂತಾ ಡಿಸೋಜ, ಚಂದನಾ ಜೈನ್, ವಿದ್ಯೆಂದ್ರ ಗೌಡ, ಯೋಗೀಶ ಎಸ್‌ಪಿ, ಧನುಷ್ ಜೈನ್, ಜಿನರಾಜ್ ಪೂವಣಿ, ವೃಷಭ ಜೈನ್, ಬಾಬು ಗೌಡ, ರಾಜೇಶ್ ಶೆಟ್ಟಿ, ಕವಿತಾ ಶ್ರೀನಿವಾಸ್ ಗೌಡ ನಿಡ್ಲೆ ಸಹಕರಿಸಿದ್ದರು.

ಕಾರ್ಯಗಾರದಲ್ಲಿ ಕಳೆಂಜ ಪಂಚಾಯಿತಿ ಸದಸ್ಯ ಟಿ.ಎಸ್ ನಿತ್ಯಾನಂದ ರೈ, ಶಾಲೆತಡ್ಕ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಹರೀಶ್ ರಾವ್ ಕಾಯಡ, ರಂಜಿತ್, ಕೇಶವ ಗೌಡ, ಪಾರ್ವತಿ ಮಹಾಬಲ, ನಾಟಿ ವೈದ್ಯ ರಮಾನಾಥ ರೈ ಉಪಸ್ಥಿತರಿದ್ದರು.

ದೇವಳದ ಅಧ್ಯಕ್ಷ ಶ್ರೀಧರ್ ರಾವ್ ಕಾಯಡ ಸನ್ಮಾನಿತರನ್ನು ಪರಿಚಯಿಸಿದರು. ಜೆಸಿ ವಾಣಿಯನ್ನು ಜೂನಿಯರ್ ಜೆಸಿ ಅದ್ವಿತ್ ಜೈನ್ ವಾಚಿಸಿದರು. ಶಿಬಿರದ ನಿರ್ದೇಶಕ ಶೋಭಾ ಪಿ ಶಿಬಿರದ ವರದಿ ವಾಚಿಸಿದರು. ಸಂತೋಷ್ ಜೈನ್ ಸ್ವಾಗತಿಸಿದರು. ಅಕ್ಷತ್ ರೈ ವಂದಿಸಿದರು.

ಸಾಧಕರಿಗೆ ಸನ್ಮಾನ

10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸುಮಾ ಪ್ರಕಾಶ್ ಶೆಟ್ಟಿ ಬೈಂದೂರು ಅವರ ಪುತ್ರಿ ತ್ರಿಷಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಬಳಿಕ ಘಟಕದ ವತಿಯಿಂದ ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net