ಏ.೧೦ ರಿಂದ ರಂಗಭೂಮಿ ಕಲಾವಿದರಿಗೆ ಬೇಸಿಗೆ ಶಿಬಿರ

LAKSHMANA
LAKSHMANA
Published on

 ರಾಯಚೂರು ರಂಗ ಕನಸು ರಂಗ ಕೇಂದ್ರ ಮಂಡಲಗೇರಾದಿAದ ಮಕ್ಕಳಲ್ಲಿ ರಂಗಭೂಮಿ ಆಸಕ್ತಿಯನ್ನು ಮೂಡಿಸಲು ನÀಗರದ ಸೇವಾ ಪದವಿ ಕಾಲೇಜಿನಲ್ಲಿ ಬೇಸಿಗೆ ಶಿಬಿರ ಆಯೋಜಿಸಲಾಗಿದೆ ಎಂದು ಶಿಬಿರ ನಿರ್ದೇಶಕ ಲಕ್ಷ÷್ಮಣ ಮಂಡಲಗೇರಾ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೇಸಿಗೆ ಶಿಬಿರವು ೧೪ ದಿನಗಳವರೆಗೆ ನಡೆಯಲಿದೆ. ಏ.೧೦ ರಿಂದ ಪ್ರಾರಂಭವಾಗಿ ಏ.೨೩ವರೆಗೆ ನಡೆಯುತ್ತದೆ. ೨೫ ವಿದ್ಯಾರ್ಥಿಗಳು ನೊಂದಣಿಯಾಗಿದ್ದು ಇನ್ನು ೧೦ ಜನರಿಗೆ ಅವಕಾಶವಿದೆ. ಅಭಿನಯ, ಕುಣಿತ, ಕೋಲಾಟ, ಚಿತ್ರಕಲೆ, ಮುಖವಾಡ ಸಿದ್ದಪಡಿಸುವದು, ರಂಗಾಟ, ಮೂಕಾಭಿನಯ ಪಾತ್ರ ಸೇರಿದಂತೆ ವಿವಿಧ ಚಟುವಟಿಕೆಗಳ ಕುರಿತು ಉಪನ್ಯಾಸ, ಪಕ್ಷಿಗಳ ಮಾಹಿತಿ ಸೇರಿ ಸೃಜನಾತ್ಮಕ ಕಲೆಗಳ ತರಬೇತಿ ನೀಡಲಾಗುತ್ತದೆ.

ಬೇರೆ ಬೇರೆ ಕಡೆಯಿಂದ ಪರಿಣಿತರು ಆಗಮಿಸಿ ತರಬೇತಿ ನೀಡಲಿದ್ದಾರೆ. ಕ್ರಾ-ï್ಟ ತರಬೇತಿ ಕುರಿತು ವಿರೇಶ ಬಡಿಗೇರ, ನಟನೆ ಕುರಿತು ಚಿದಾನಂದ ಸೇರಿ ಅನೇಕರು ಭಾಗಿಯಾಗಲಿದ್ದಾರೆ. ತರಬೇತಿ ಪಡೆದ ಮಕ್ಕಳಿಂದ ನಾಟಕ ಪ್ರದರ್ಶನ ದೇವರಾಜ ನಿರ್ದೇಶನದಲ್ಲಿ ಪ್ರದರ್ಶನ ಮಾಡಲಾಗುತ್ತದೆ. ಆಸಕ್ತರು ನೊಂದಣಿ ಮಾಡಿಕೊಳ್ಳಬೇಕೆಂದರು.

ಈ ಸಂದರ್ಭದಲ್ಲಿ ಸಾಗರ ಇಟೇಕರ್ ಇದ್ದರು.

 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net