ಅಗಸ್ತ್ಯ ಪ್ರತಿಷ್ಠಾನದಿಂದ ಬೇಸಿಗೆ ಶಿಬಿರ 21ರಿಂದ

Published on

ಹುಬ್ಬಳ್ಳಿ: ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನ, ಏಕಸ್ ಪ್ರತಿಷ್ಠಾನ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದೊಂದಿಗೆ ನಗರದ ಹೊಸೂರ ಅನುಸೂಯ ಮೆಳ್ಳಿಗೇರಿ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರದಲ್ಲಿ ಏ. 21ರಿಂದ ಉಚಿತ ಯೋಜನಾಧಾರಿತ ಮತ್ತು ಇಂಜಿನಿಯರಿಂಗ್ ಆಧಾರಿತ ಕಲಿಕಾ ಶಿಬಿರ ಏರ್ಪಡಿಸಲಾಗಿದೆ.

3ನೇ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ಆಸಕ್ತರು ಹೆಸರು ನೋಂದಾಯಿಸಿಕೊಳ್ಳಬೇಕೆಂದು ಪ್ರತಿಷ್ಠಾನದ ವಲಯ ಮುಖ್ಯಸ್ಥ ಶಿವಾನಂದ ಚಲವಾದಿ ಕೋರಿದ್ದಾರೆ.

ಯೋಜನಾಧಾರಿತ ಮತ್ತು ಇಂಜಿನಿಯರಿಂಗ್ ಆಧಾರಿತ ಕಲಿಕಾ ಪದ್ಧತಿಯ ಮೂಲಕ ಮಕ್ಕಳಿಗೆ ವಿವಿಧ ವಿಷಯಗಳ ಮೇಲೆ ಸಮಸ್ಯೆಗಳನ್ನು ನೀಡಿ ಪರಿಹಾರ ಪಡೆಯಲಾಗುತ್ತದೆ. ವಿಜ್ಞಾನದ ಪ್ರಯೋಗಗಳು ಮತ್ತು ಚಟುವಟಿಕೆಗಳನ್ನು ಮಾಡಿಸಲಾಗುತ್ತದೆ. ನೀವೆ ಮಾಡಿ ನೋಡಿ ಚಟುವಟಿಕೆ ಕೈಪಿಡಿ ಕೊಡಲಾಗುವುದು ಎಂದು ಶಿಬಿರದ ಆಯೋಜಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net