

ಆಟದೊಂದಿಗೆ ಪಾಠ, ತನ್ನ ಸ್ವಂತ ಊರಿನ ಪರಿಚಯ, ಕ್ರಾಪ್ಟ್, ಸಂಗೀತ, ನಾಟಕ, ಹೊರಸಂಚಾರ, ಸಾಮಾನ್ಯ ಜ್ಞಾನ ಹೆಚ್ಚಿಸುವ ಚಟುವಟಿಕೆಗಳು, ಮಂಡ್ಯದ ಹಿರಿಮೆ ಸಾರುವ ಚಟುವಟಿಕೆಗಳು, ಓರೇಗಾಮಿ, ಗ್ರಾಮೀಣ ಕ್ರೀಡೆಗಳ ಪರಿಚಯ ಇತ್ಯಾದಿ ಮಕ್ಕಳ ಮಾನಸಿಕ , ದೈಹಿಕ ಸಾಮರ್ಥ್ಯ ವೃದ್ಧಿಸುವ ಚಟುವಟಿಕೆಗಳನ್ನು ಜಿಪಂ ವತಿಯಿಂದ ಆಯೋಜಿಸಲಾಗುತ್ತಿದೆ. ಪುಟ್ಟ ಮಕ್ಕಳು ಇದರ ಸದುಪಯೋ ಗ ಪಡೆದುಕೊಳ್ಳಲಿ. ಕೆ.ಆರ್.ನಂದಿನಿ ಜಿಪಂ ಸಿಇಒ