ಪಠ್ಯೇತರ ಚಟುವಟಿಕೆಯಿಂದ ಸರ್ವತೋಮುಖ ಬೆಳವಣಿಗೆ : ಪ್ರೊ.ಎಸ್.ಎನ್.ಕಾಕತ್ಕರ್ ಹೇಳಿಕೆ

New Project
Published on

ಬೆಳ್ತಂಗಡಿ: ವಿದ್ಯಾರ್ಥಿಯು ಪಠ್ಯ ಪೂರಕ ಕಲಿಯುವಿಕೆಯಿಂದ ಪೂರ್ಣನಾಗುತ್ತಾನೆ. ಪಠ್ಯೇತರ ಚಟುವಟಿಕೆ, ಕೌಶಲ ಅಭಿವೃದ್ಧಿಯಿಂದಾಗಿ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಯಾಗಿ ಪರಿಪೂರ್ಣನಾಗುತ್ತಾನೆ. ಈ ನಿಟ್ಟಿನಲ್ಲಿ ಬೇಸಿಗೆ ಶಿಬಿರ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಂಯೋಜಕ ಪ್ರೊ.ಎಸ್.ಎನ್.ಕಾಕತ್ಕರ್ ಹೇಳಿದರು.

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹೈಸ್ಕೂಲ್ ಮಟ್ಟದ ಶಾಲಾ ವಿದ್ಯಾರ್ಥಿಗಳಿಗೆ 9 ದಿನಗಳ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಪ್ರಾಚಾರ್ಯ ಡಾ.ಅಶೋಕ್ ಕುಮಾರ್ ಮಾತನಾಡಿ, ಶಿಬಿರದಲ್ಲಿ ಕಂಪ್ಯೂಟರ್ ಅಸೆಂಬ್ಲಿಂಗ್,ಇಲೆಕ್ಟ್ರಾನಿಕ್ಸ್, ಸೌರಶಕ್ತಿ ಉತ್ಪಾದನೆ, ಮುಂತಾದ ತಂತ್ರಜ್ಞಾನ ವಿಷಯಗಳೊಂದಿಗೆ ಬೌದ್ಧಿಕ, ಕೌಶಲ ಅಭಿವೃದ್ಧಿ ವಿಷಯ, ಐಡಿಯಾ ಜನರೇಶನ್, ಪ್ರಾಜೆಕ್ಟ್ ತಯಾರಿ, ಕಾರ್ಯಕ್ರಮ ನಿರ್ವಹಣೆ, ಕ್ರೀಡೆ, ಯೋಗ ಮುಂತಾದ ವಿಷಯಗಳ ಬಗ್ಗೆ ತರಬೇತಿ ನೀಡಲಾಗುವುದು ಎಂದರು.

ಇಲೆಕ್ಟ್ರಾನಿಕ್ಸ್ ವಿಭಾಗದ ಸಹ ಪ್ರಾಧ್ಯಾಪಕ ರಾಧಾಕೃಷ್ಣ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಮಹೇಶ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net