ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳ ಜ್ಞಾನ : ನಿತ್ಯಾನಂದ ಮುಂಡೋಡಿ ಅಭಿಮತ

28
Published on

ಸುಬ್ರಹ್ಮಣ್ಯ: ಬೇಸಿಗೆ ಶಿಬಿರಗಳು ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳ ಜ್ಞಾನವನ್ನು ಬೋಧಿಸುತ್ತದೆ. ಶಿಬಿರಗಳಿಂದ ಮಕ್ಕಳು ಎಳವೆಯಲ್ಲಿ ಕೌಶಲಯುತರಾಗಲು ಸಾಧ್ಯವಾಗುತ್ತದೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹೇಳಿದರು.

ಪಂಜ ಕ್ರಿಯೇಟಿವ್ ಚಿತ್ರಕಲಾ ಶಾಲೆಯ ಆಶ್ರಯದಲ್ಲಿ ಪಂಜ ಲಯನ್ಸ್ ಕ್ಲಬ್, ತಂಟೆಪ್ಪಾಡಿ ನಿನಾದ ಸಾಂಸ್ಕೃತಿಕ ಕೇಂದ್ರ, ಪಂಜ ಕಲಾಮಂದಿರ್ ಡ್ಯಾನ್ಸ್ ಕ್ರೀವ್ ಸಹಕಾರದೊಂದಿಗೆ ಪಂಜದಲ್ಲಿ ರಾಜ್ಯ ಮಟ್ಟದ ಮಕ್ಕಳ ಬೇಸಿಗೆ ಶಿಬಿರ ‘ನಲಿಕಲಿ’ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ತಂಟೆಪ್ಪಾಡಿ ನಿನಾದ ಸಾಂಸ್ಕೃತಿಕ ಕೇಂದ್ರದ ಸಂಚಾಲಕ ವಸಂತ ಶೆಟ್ಟಿ, ನಟಿ ಕರಿಷ್ಮಾ ಅಮೀನ್, ಲಯನ್ಸ್ ಕ್ಲಬ್ ಪೂರ್ವ ವಲಯಾಧ್ಯಕ್ಷ ಸಂತೋಷ್ ಜಾಕೆ, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮುಖ್ಯಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ, ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ಶಶಿಧರ ಪಳಂಗಾಯ, ಬೆಳ್ಳಾರೆ ಕಲಾಮಂದಿರ್‌ನ ನಿರ್ದೇಶಕ ಪ್ರಮೋದ್ ರೈ ಬೆಳ್ಳಾರೆ, ಶಿಬಿರ ಸಂಚಾಲಕ ಸತೀಶ್ ಪಂಜ, ಪ್ರಮುಖರಾದ ಚಿನ್ನಪ್ಪ ಸಂಕಡ್ಕ, ಸೋಮಶೇಖರ ನೇರಳ, ಕವಿತಾ ನೇರಳ ವೇದಿಕೆಯಲ್ಲಿದ್ದರು.

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ

ಆರು ಮಂದಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಚಲನಚಿತ್ರ ನಟಿ ಕರಿಷ್ಮಾ ಅಮೀನ್ ಮತ್ತು ನಿನಾದ ಸಾಂಸ್ಕೃತಿಕ ಕೇಂದ್ರದ ಸಂಚಾಲಕ ವಸಂತ ಶೆಟ್ಟಿ ಅವರನ್ನು ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net