ಏ.12ರಿಂದ ಬಣ್ಣ ಬೇಸಿಗೆ ಶಿಬಿರ

New Project
Published on

ಸುಳ್ಯ: ಇಲ್ಲಿನ ರಂಗ ಮಯೂರಿ ಕಲಾ ಶಾಲೆ ವತಿಯಿಂದ ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗಿ ಬೇಸಿಗೆ ಶಿಬಿರ ಬಣ್ಣ ಏಪ್ರಿಲ್ 12ರಿಂದ 20ರ ವರೆಗೆ ಸುಳ್ಯ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ವಠಾರದಲ್ಲಿ ನಡೆಯಲಿದೆ ಎಂದು ರಂಗ ಮಯೂರಿ ಕಲಾ ಶಾಲೆ ಆಡಳಿತ ನಿರ್ದೇಶಕ ಲೋಕೇಶ್ ಊರುಬೈಲ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ, ಭಾಷಾ ಶುದ್ಧಿ, ಸ್ಪಷ್ಟ ಉಚ್ಚ್ಚರಣೆ, ರಂಗ ಚಲನೆ, ರಂಗ ಸಂಗೀತ, ರಂಗ ಪರಿಕರ ತಯಾರಿ, ರಂಗ ಪ್ರಸಾದನ ಕಾರ್ಯಾಗಾರಕ್ಕೆ ಆದ್ಯತೆ ನೀಡಲಾಗುವುದು. ಬಹುಭಾಷಾ ನಾಟಕಗಳ ಕಲಿಕೆ, ಅಭಿನಯ ಕಾರ್ಯಾಗಾರ, ಪ್ರದರ್ಶನಕ್ಕೆ ಅವಕಾಶ ನೀಡಲಾಗುವುದು. ಕನ್ನಡ, ತುಳು, ಅರೆಭಾಷೆ, ಇಂಗ್ಲಿಷ್, ಹಿಂದಿ ನಾಟಕಗಳ ಸಂಗಮ, ಭಾಷಾ ಪರಿಚಯ ಶಿಬಿರದ ವಿಶೇಷತೆಯಾಗಿದೆ. 7ರಿಂದು 17 ವಯಸ್ಸಿನ ಮಕ್ಕಳಿಗೆ ಶಿಬಿರದಲ್ಲಿ ಭಾಗವಹಿಸಲು ಅವಕಾಶವಿದೆ. ಹೆಸರು ನೋಂದಾಯಿಸಲು ಏಪ್ರಿಲ್ 5 ಕೊನೆಯ ದಿನ. ಬೆಳಗ್ಗೆ 8.45ರಿಂದ ಸಂಜೆ 5 ಗಂಟೆ ತನಕ ಶಿಬಿರ ನಡೆಯಲಿದೆ ಎಂದು ಲೋಕೇಶ್ ಊರುಬೈಲು ತಿಳಿಸಿದರು.

ಶಿಬಿರದ ವಿಶೇಷವೆಂದರೆ ಈ ಬಾರಿ ಮಕ್ಕಳಲ್ಲಿ ಬಹುಭಾಷಾ ವೈವಿಧ್ಯತೆ ಜತೆ ಹೊಸ ಕ್ರಿಯಾತ್ಮಕ ಯೋಜನೆಯೊಂದಿಗೆ ಶಿಬಿರ ಮೂಡಿಬರಲಿದೆ. ಹೆಸರಾಂತ ರಂಗ ಸಂಸ್ಥೆಗಳಾದ ನೀನಾಸಂ, ರಂಗಾಯಣ, ರಂಗ ಅಧ್ಯಯನ ಕೇಂದ್ರ ಶಿವಸಂಚಾರದ ನಾಟಕ ನಿರ್ದೇಶಕರು, ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಲಿದ್ದಾರೆ. ಅಭಿನಯ ಪ್ರಧಾನ ರಂಗ ತರಬೇತಿಯೊಂದಿಗೆ ನಾಟಕ ರೂಪಕಗಳ ಹಬ್ಬದ ಜತೆ, ಕನ್ನಡ, ಅರೆಭಾಷೆ, ತುಳು, ಹಿಂದಿ, ಇಂಗ್ಲಿಷ್ ಭಾಷಾ ವೈವಿಧ್ಯ ನಾಟಕಗಳೊಂದಿಗೆ, ನವರಸಗಳ ಅಭಿನಯ ಕಾರ್ಯಾಗಾರ ನಡೆಯಲಿದೆ ಎಂದು ತಿಳಿಸಿದರು.

ರಂಗ ಮಯೂರಿ ಕಲಾ ಶಾಲೆ ಸುನಂದಾ ಶೆಟ್ಟಿ, ಶಶಿಕಾಂತ್ ಮಿತ್ತೂರು, ಸೌಮ್ಯ ಆಲಂಕಳ್ಯ, ಮೇಘ ಕೃಷ್ಣ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net