

ಕಡಬ: ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಲು ಸೂಕ್ತ ವೇದಿಕೆಗಳು ಅವಶ್ಯಕ ಎಂದು ಅಗಳಿ ಶ್ರೀ ಸದಾಶಿವ ದೇವಸ್ಥಾನದ ಆನುವಂಶಿಯ ಮೊಕ್ತೇಸರ ಶಿವರಾಮ ಗೌಡ ಅಗಳಿ ಹೇಳಿದರು.
ಅಗಳಿ ಶ್ರೀ ಸದಾಶಿವ ದೇವಸ್ಥಾನ, ಬೆಳಂದೂರು ಬಹುರೂಪಿ ಸಾಂಸ್ಕೃತಿಕ ಕಲಾ ಕೇಂದ್ರ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಅಗಳಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಜ್ಞಾನ ಜ್ಯೋತಿ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಬೆಳಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಸೀತಾರಾಮ ಗೌಡ ಮುಂಡಾಳ ಅಧ್ಯಕ್ಷತೆ ವಹಿಸಿದ್ದರು.
ಕಾಣಿಯೂರು ವಿಶ್ವಜ್ಞ ಯುವಕ ಮಂಡಲದ ಗೌರವಾಧ್ಯಕ್ಷ ಜನಾರ್ದನ ಆಚಾರ್ಯ ಕಾಣಿಯೂರು, ಅಗಳಿ ಶ್ರೀ ಸದಾಶಿವ ಮಹಿಳಾ ಮಂಡಲದ ಅಧ್ಯಕ್ಷೆ ಸವಿತಾ ಅಗಳಿ ಶುಭಹಾರೈಸಿದರು. ಅಗಳಿ ಶ್ರೀ ಸದಾಶಿವ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಚೆನ್ನಪ್ಪ ಗೌಡ ಅಗಳಿ, ಪ್ರಗತ್ರಾಜ್ ಬೈತಡ್ಕ, ಪ್ರಗತಿಪರ ಕೃಷಿಕ ಲಿಂಗಪ್ಪ ಗೌಡ ಅಗಳಿ, ದೇವರಗುಡ್ಡೆ ವೀರಾಂಜನೇಯ ಗೆಳೆಯರ ಬಳಗದ ಸೇವಾ ಟ್ರಸ್ಟ್ ಉಪಾಧ್ಯಕ್ಷ ವಸಂತ ಗೌಡ ಕೂಂಕ್ಯ, ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲ ಅಧ್ಯಕ್ಷ ರಾಜೇಶ್ ಮೀಜೆ, ವರದಿಗಾರ ಸುಧಾಕರ್ ಕಾಣಿಯೂರು, ಅಗಳಿ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷೆ ಚಂಪಾ ಕುಶಾಲಪ್ಪ ಅಬೀರ ಉಪಸ್ಥಿತರಿದ್ದರು.
ಬೆಳಂದೂರು ಬಹುರೂಪಿ ಸಾಂಸ್ಕೃತಿಕ ಕಲಾ ಕೇಂದ್ರ ಸಂಚಾಲಕ ರಾಕೇಶ ಆಚಾರ್ಯ ಬನಾರಿ ಸ್ವಾಗತಿಸಿದರು. ಶಿಕ್ಷಕಿ ಪೂರ್ಣಿಮಾ ಆನಂದ ಕೂಂಕ್ಯ ನಿರೂಪಿಸಿದರು. ದೇವರಗುಡ್ಡೆ ವೀರಾಂಜನೇಯ ಗೆಳೆಯರ ಬಳಗ ಸೇವಾ ಟ್ರಸ್ಟ್ ಕಾರ್ಯದರ್ಶಿ ಅನಿಲ್ ಕಂಡಿಗ ವಂದಿಸಿದರು.