

ವಿಜಯಪುರ : ನಗರದ ನವಭಾಗದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಎ 3ನೇ ಸೆಮಿಸ್ಟರ್‌ನ ವಿದ್ಯಾರ್ಥಿ ಸುಮೀತ ದೇಶಪಾಂಡೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಬೆಳಗಾವಿ ಪುರುಷರ ಕ್ರಿಕೆಟ್ ತಂಡಕ್ಕೆ ಯುನಿವರ್ಸಿಟಿ ಬ್ಲೂೃ ಆಗಿ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಯ ಸಾಧನೆಗೆ ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷ, ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಪ್ರಾಚಾರ್ಯ ಡಾ. ಎ.ಐ. ಹಂಜಗಿ, ಕ್ರೀಡಾ ನಿರ್ದೇಶಕ ಸಂಗಮೇಶ ಗುರವ, ಐಕ್ಯೂಎಸಿ ಸಂಚಾಲಕ ಡಾ. ಸಂತೋಷ ಕಬಾಡೆ, ಕ್ರೀಡಾ ಸಮಿತಿ ಸದಸ್ಯ ಎಂ.ಎಸ್. ಖೊದ್ನಾಪೂರ, ಡಾ. ಬಿ.ಎನ್. ಶಾಡದಳ್ಳಿ, ಶಿವಾನಂದ ಜಮಾದಾರ, ಡಾ. ಎಸ್.ಪಿ. ಚವ್ಹಾಣ. ಡಾ. ಪಿ.ಎಂ. ಪರುಗೊಂಡ, ಬೋಧಕೇತರ, ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.