

ವಿಜಯವಾಣಿ ಸುದ್ದಿಜಾಲ ಧಾರವಾಡ
ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ. ಕಲಾ ವಿಭಾಗದಲ್ಲಿ ಹುಬ್ಬಳ್ಳಿ ವಿದ್ಯಾನಗರದ ಎಸ್.ಕೆ. ಆರ್ಟ್ಸ್, ಸೈನ್ಸ್ ಕಾಲೇಜಿನ ಇನಿಷ್ಕಾ ನಡುಗಡ್ಡಿ 594 ಅಂಕ ಗಳಿಸಿ ರಾಜ್ಯಕ್ಕೆ 4ನೇ ಸ್ಥಾನ ಗಳಿಸಿದ್ದಾಳೆ. ಹುಬ್ಬಳ್ಳಿ ಗೋಪನಕೊಪ್ಪದ ಸರ್ಕಾರಿ ಪಿಯು ಕಾಲೇಜಿನ ನಾಗವೇಣಿ ರಾಯಚೂರ 593 ಅಂಕ ಗಳಿಸಿ ರಾಜ್ಯಕ್ಕೆ 5ನೇ ರ‍್ಯಾಂಕ್ ಗಳಿಸಿದ್ದಾಳೆ.
ವಿಜ್ಞಾನ ವಿಭಾಗದಲ್ಲಿ ಹುಬ್ಬಳ್ಳಿಯ ಬೈರಿದೇವರಕೊಪ್ಪದ ವಿದ್ಯಾನಿಕೇತನ ಪಿಯು ವಿಜ್ಞಾನ ಕಾಲೇಜಿನ ವಿದ್ಯಾರ್ಥಿ ಸುಮಿತ್ ರಾಶಿನಕರ 594 ಅಂಕ ಗಳಿಸಿ ರಾಜ್ಯಕ್ಕೆ 6ನೇ ರ‍್ಯಾಂಕ್ ಗಳಿಸಿದ್ದಾನೆ. ವಿದ್ಯಾನಿಕೇತನ ಪಿಯು ವಿಜ್ಞಾನ ಕಾಲೇಜಿನ ಅಭಿನವ ಹಿರೇಕುಂಬಿ 592 ಅಂಕ, ಧಾರವಾಡದ ವಿದ್ಯಾ ಪಿ. ಹಂಚಿನಮನಿ ಕಾಲೇಜಿನ ಕಾವೇರಿ ಕೇವಟಿ 592 ಅಂಕ, ವಿದ್ಯಾನಿಕೇತನ ಪಿಯು ವಿಜ್ಞಾನ ಕಾಲೇಜಿನ ಶ್ರೀಶೈಲ ಭಂಡಿವಾಡ 592 ಅಂಕ ಪಡೆದು ರಾಜ್ಯಕ್ಕೆ 8ನೇ ರ‍್ಯಾಂಕ್ ಪಡೆದಿದ್ದಾರೆ. ಧಾರವಾಡದ ವಿದ್ಯಾ ಪಿ. ಹಂಚಿನಮನಿ ಕಾಲೇಜಿನ ಆಯುಷ್ ಜೋಗಳೇಕರ 591 ಅಂಕ ಪಡೆದು ರಾಜ್ಯಕ್ಕೆ 9ನೇ ರ‍್ಯಾಂಕ್ ಪಡೆದಿದ್ದಾನೆ.
ವಾಣಿಜ್ಯ ವಿಭಾಗದಲ್ಲಿ ಹುಬ್ಬಳ್ಳಿ ವಿದ್ಯಾನಗರದ ಕೆಎಲ್‌ಇ ವಾಣಿಜ್ಯ ಪಿಯು ಕಾಲೇಜಿನ ಭುವಿ ಸಿ. ಶಹಾ 592 ಅಂಕ ಮತ್ತು ಜೆ.ಜಿ. ವಾಣಿಜ್ಯ ಮತ್ತು ವಿಜ್ಞಾನ ಪಿಯು ಕಾಲೇಜಿನ ಶ್ರೇಯಾ ಜೋಷಿ 591 ಅಂಕ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.