ಗಣೇಶ ಬಾವಿಗೆ ಬಾಗಿನ ಅರ್ಪಿಸಿದ ಸುಮಂಗಲೆಯರು

h17-mahamandala
Published on

ಹುಬ್ಬಳ್ಳಿ: ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳವು ನಗರದ ಹೊಸೂರಿನ ಶ್ರೀ ಗಣೇಶ ಬಾವಿಗೆ ಶ್ರದ್ಧಾ, ಭಕ್ತಿಯಿಂದ ಭಾನುವಾರ ಬಾಗಿನ ಅರ್ಪಿಸಿತು.

ಶ್ರೀ ಗಣೇಶ ಪೂಜೆ, ಗಂಗಾ ಪೂಜೆ, ಶ್ರೀ ಶಿವ ಪಾರ್ವತಿ ಪೂಜೆ, ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಶ್ರೀ ಗಣೇಶ ಹಬ್ಬದ ಸಂಭ್ರಮದಲ್ಲಿ ಯಾವುದೇ ತರಹದ ವಿಘ್ನಗಳು ಬಾರದಂತೆ ಹಾಗೂ ಶ್ರೀ ಗಣೇಶ ವಿಸರ್ಜನಾ ಸಂದರ್ಭದಲ್ಲಿ ಶಾಂತಿ-ನೆಮ್ಮದಿ ನೆಲೆಸುವಂತೆ ಪ್ರಾರ್ಥಿಸಿ, ಪೂಜೆ ನೆರವೇರಿಸಿ ಸುಮಂಗಲೆಯರು ಬಾವಿಗೆ ಬಾಗಿನ ಸಮರ್ಪಿಸಿದರು.

ಅತಿಥಿಗಳಾಗಿ ಆಗಮಿಸಿದ್ದ ಡಾ. ಚಂದ್ರಪ್ರಭಾ ಪೂಜಾರಿ, ಸುನಂದಾ ಲಿಂಬಿಕಾಯಿ ಮಾತನಾಡಿ, ಗಣೇಶೋತ್ಸವ ನಮ್ಮೆಲ್ಲರನ್ನು ಒಗ್ಗೂಡಿಸುತ್ತದೆಯೇ ಹೊರತು ವಿಘಟಿಸುವುದಿಲ್ಲ. ಒಂದಾಗಿ ಬಾಳುವುದನ್ನು ಕಲಿಸುವ ಹಬ್ಬದಲ್ಲಿ ನಾವೆಲ್ಲ ಮಿಂದೆದ್ದು ಸಂಭ್ರಮಿಸೋಣ. ಎಲ್ಲೆಡೆ ಮಳೆ-ಬೆಳೆಯಾಗಲಿ, ಶಾಂತಿ ನೆಲೆಸಲು ಪ್ರಥಮ ವಂದಿತನಿಗೆ ಪ್ರಾರ್ಥಿಸೋಣ ಎಂದರು. ಸುಮಾ ಶೀಲವಂತರ ಮಾತನಾಡಿದರು.

ಸ್ಮಿತಾ ಸಂಕಣ್ಣವರ, ರೇಷ್ಮಾ ಶೀಲವಂತರ, ಸಾಧನಾ ಪೂಜಾರ, ಗಾಯತ್ರಿ ನೆಲ್ಲಿಕೊಪ್ಪ, ರೇಖಾ ಆಪ್ಟೆ, ಸರಸ್ವತಿ ಮೆಹರವಾಡೆ, ಸವಿತಾ ಸುರೇಬಾನ, ಸಂಗೀತಾ ದೇವದಾಸ, ಅಕ್ಕಮ್ಮ ಕಂಬಳಿ, ಅನಿತಾ ಜಡಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net