ಸುಮೈಯಾ ಮುಲ್ಲಾಗೆ ಚಿನ್ನದ ಪದಕ ಪ್ರದಾನ

Sumaiya Mulla awarded gold medal
ಬೆಂಗಳೂರಿನಲ್ಲಿ ನಡೆದ ಘಟಿಕೋತ್ಸವದಲ್ಲಿ ಸುಮೈಯಾ ಮುಲ್ಲಾಗೆ ಚಿನ್ನದ ಪದಕ ಪ್ರದಾನ ರಾಜ್ಯಪಾಲ ಥಾವರಚಂದ್ ಗೆಹಲೋಟ್ ಚಿನ್ನದ ಪದಕ ಪ್ರದಾನ ಮಾಡಿದರು.
Published on

ವಿಜಯಪುರ : ಸಿಕ್ಯಾಬ್ ಸಂಸ್ಥೆಯ ಲುಕ್ಮಾನ್ ಯುನಾನಿ ಮೆಡಿಕಲ್ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೆಂದ್ರದ ವಿದ್ಯಾರ್ಥಿನಿ ಸುಮೈಯಾ ಮುಲ್ಲಾ ಇವರು ಬಿಯುಎಂಎಸ್ ಅಂತಿಮ ವರ್ಷದ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಬೆಂಗಳೂರಲ್ಲಿ ಜರುಗಿದ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯದ 26ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರು ಮತ್ತು ವಿವಿಯ ಕುಲಾಧಿಪತಿಗಳೂ ಆದ ಥಾವರಚಂದ್ ಗೆಹಲೋಟ್ ಇವರು ಚಿನ್ನದ ಪದಕ ಮತ್ತು ಪ್ರಮಾಣಪತ್ರವನ್ನು ಪ್ರದಾನ ಮಾಡಿದರು.

ಸುಮೈಯಾ ಮುಲ್ಲಾ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಎಸ್.ಎ. ಪುಣೆಕರ, ಪ್ರಧಾನ ಕಾರ್ಯದರ್ಶಿ ಎ.ಎಸ್. ಪಾಟೀಲ, ನಿರ್ದೇಶಕ ಸಲಾಹುದ್ದೀನ್ ಅಯೂಬಿ, ಡೀನ್ ಡಾ. ಅಕೀಲ್ ಖಾದ್ರಿ, ಪ್ರಾಚಾರ್ಯೆ ಡಾ. ಶಹನಾಜ್ ಬಾನು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net