ಸುಳ್ಯ ತಾಲೂಕು ಕಚೇರಿ ಕಂಟೇನ್ಮೆಂಟ್ ಜೋನ್ : 4 ಅಧಿಕಾರಿಗಳಿಗೆ ಸೋಂಕು

Sulya talluk office Containment zone
Published on

ಸುಳ್ಯ: ಇಲ್ಲಿನ ತಾಲೂಕು ಕಚೇರಿಯಲ್ಲಿ ಕಾರ್ಯನಿರ್ವಹಿಸುವ ನಾಲ್ಕು ಮಂದಿ ಅಧಿಕಾರಿಗಳಿಗೆ ಕೋವಿಡ್ ಪಾಸಿಟಿವ್ ಹಿನ್ನೆಲೆಯಲ್ಲಿ ತಾಲೂಕು ಕಚೇರಿಯನ್ನು ಕಂಟೇನ್ಮೆಂಟ್ ಜೋನ್ ಎಂದು ಘೋಷಣೆ ಮಾಡಲಾಗಿದ್ದು, ಕೆಲದಿನಗಳವರೆಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಸೋಂಕಿತರೊಂದಿಗಿಗೆ ಸಂಪರ್ಕಹೊಂದಿದ ಒಟ್ಟು 27 ಮಂದಿಯ ಸ್ವಾಬ್ ಪರೀಕ್ಷೆ ನಡೆಸಲಾಗಿದೆ. ಆದರೆ, ಪರೀಕ್ಷೆಯ ಫಲಿತಾಂಶ ಇನ್ನಷ್ಟೇ ಬರಬೇಕಾಗಿದೆ.

ಅನಗತ್ಯವಾಗಿ ಯಾರೂ ತಾಲೂಕು ಕಚೇರಿಗೆ ಬರುವುದು ಬೇಡ.ಸಾರ್ವಜನಿಕರು ಯಾವುದಾದರು ಅರ್ಜಿಗಳಿದ್ದರೆ ಟಪಾಲ್ ಬಾಕ್ಸ್‌ನಲ್ಲಿ ಹಾಕಿದರೆ ಅರ್ಜಿ, ಕಡತ ಸಂಬಂಧಪಟ್ಟ ಕೆಲಸ ಮಾಡಿ ಕೊಡಲಾಗುವುದು. ತಾಲೂಕು ಕಚೇರಿಯ ಕೆಲಸ ಕಾರ್ಯಗಳು ಎಂದಿನಂತೆ ನಡೆಯುತ್ತವೆ ಎಂದು ತಹಸೀಲ್ದಾರ್ ಅನಿತಾಲಕ್ಷ್ಮೀ ಹೇಳಿದ್ದಾರೆ.

ಸೋಂಕಿತರ ಸಂಖ್ಯೆ ಇಳಿಕೆ: ಕೆಲದಿನಗಳಿಂದ ಕರೊನಾ ಸೋಂಕಿತರ ಸಂಖ್ಯೆ ತಾಲೂಕಿನಲ್ಲಿ ಏರಿಕೆ ಕಂಡಿದ್ದರೆ, ಮಂಗಳವಾರ ಸಂಖ್ಯೆಯಲ್ಲಿ ತುಸು ಇಳಿಕೆಯಾದಂತಿದೆ. ಮಂಗಳವಾರ ಸುಳ್ಯ ತಾಲೂಕಿನಲ್ಲಿ ಕಂಡುಬಂದ ಹೊಸ ಪ್ರಕರಣಗಳ ಸಂಖ್ಯೆ 23.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net