ಸುಳ್ಯ ಶೂಟೌಟ್ ಪ್ರಕರಣ ಐವರು ಪೊಲೀಸ್ ವಶಕ್ಕೆ

car-1
Published on

ಮಂಗಳೂರು: ಸುಳ್ಯದ ಶಾಂತಿ ನಗರದಲ್ಲಿ ಗುರುವಾರ ನಡೆದ ಕಲ್ಲುಗುಂಡಿಯ ಸಂಪತ್ ಕುಮಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದಿರುವವರೆಲ್ಲರೂ ಕಲ್ಲುಗುಂಡಿ ಪರಿಸರದವರು ಎಂದು ಮೂಲಗಳು ತಿಳಿಸಿವೆ.

ಸಂಪಾಜೆ ಗ್ರಾಪಂ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಕಳಗಿ ಬಾಲಚಂದ್ರರ ಕೊಲೆ ಪ್ರಕರಣದ ಆರೋಪಿಗಳಲ್ಲಿ ಓರ್ವನಾಗಿದ್ದ ಸಂಪಾಜೆ ಗ್ರಾಮದ ಕಲ್ಲುಗುಂಡಿ ಸಮೀಪದ ದೊಡ್ಡಡ್ಕ ನಿವಾಸಿ ಸಂಪತ್‌ಕುಮಾರ್(40)ರನ್ನು ಮುಸುಕುಧಾರಿಗಳ ತಂಡವೊಂದು ಗುರುವಾರ ಮುಂಜಾನೆ ನಾಡಕೋವಿಯಿಂದ ಗುಂಡಿಕ್ಕಿ, ತಲವಾರಿನಿಂದ ಕಡಿದು ಕೊಲೆಗೈದಿತ್ತು.

ಅರಂತೋಡು ಬಳಿಯ ಕಳುಬೈಲು ಎಂಬಲ್ಲಿರುವ ರಬ್ಬರ್ ತೋಟವೊಂದರಲ್ಲಿ ಕೊಲೆ ಕೃತ್ಯಕ್ಕೆ ಬಳಸಿದ್ದೆನ್ನಲಾದ ನೀಲಿ ಬಣ್ಣದ ಕ್ವಾಲೀಸ್ ಕಾರು ಶುಕ್ರವಾರ ಪತ್ತೆಯಾಗಿತ್ತು. ಕಾರು ಚೊಕ್ಕಾಡಿಯ ಪದ್ಮನಾಭ ಎಂಬವರಿಗೆ ಸೇರಿದ್ದಾಗಿದ್ದು, ಮನು ಎಂಬಾತ ಶೂಟಿಂಗ್ ಇದೆ ಎಂದು ಕಾರನ್ನು ತೆಗೆದುಕೊಂಡು ಬಂದಿದ್ದ. ಇದೀಗ ಕಾರವಾರದಲ್ಲಿ ಡಿಸಿಐಬಿ ಹಾಗು ಸುಳ್ಯ ಸರ್ಕಲ್ ಇನ್‌ಸ್ಪೆಕ್ಟರ್ ಅವರ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದೆ.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net