ಸುಳ್ಯ ಕೊಲೆ ಮನು ತಂಡದ ಕೃತ್ಯವೇ? ಆರೋಪಿಗಳು ಬಳಸಿದ ಕ್ವಾಲೀಸ್ ಪತ್ತೆ

Murder
Published on

ಮಂಗಳೂರು: ಸುಳ್ಯ ಶಾಂತಿನಗರದಲ್ಲಿ ಗುರುವಾರ ಬೆಳಗ್ಗೆ ಶೂಟೌಟ್ ನಡೆಸಿ ಕಳಗಿ ಬಾಲಚಂದ್ರ ಕೊಲೆ ಆರೋಪಿ ಸಂಪತ್ ನನ್ನು ಕೊಲೆ ಮಾಡಿದ ಆರೋಪಿಗಳು ಬಳಸಿದ ಹಸಿರು ಬಣ್ಣದ ಕ್ವಾಲೀಸ್ ಅರಂತೋಡು ಕಳುಬೈಲು ರಬ್ಬರ್ ತೋಟದಲ್ಲಿ ಪತ್ತೆಯಾಗಿದೆ.

ಕ್ವಾಲಿಸ್ ಚೊಕ್ಕಾಡಿಯ ಪದ್ಮನಾಭ ಎಂಬವರಿಗೆ ಸೇರಿದ್ದಾಗಿದ್ದು, ಕಲ್ಲುಗುಂಡಿಯ ಮನು ಎಂಬಾತ ಶೂಟಿಂಗ್ ಇದೆ ಎಂದು ಸೆ.30 ರಂದು ಕೊಂಡೊಯ್ದಿದ್ದ. ಮನೀಶ್ ಬಾಬು ಗೌಡ ಎಂಬವರ ರಬ್ಬರ್ ತೋಟವನ್ನು ಕಲ್ಲುಗುಂಡಿಯ ಮಧು ಎಂಬಾತ ಲೀಸಿಗೆ ಪಡೆದುಕೊಂಡಿದ್ದ. ಮನೀಶ್ ಅವರು ಶುಕ್ರವಾರ ರಬ್ಬರ್ ತೋಟಕ್ಕೆ ಹೋದಾಗ ಕ್ವಾಲೀಸ್ ನಿಂತಿರುವುದು ಗಮನಕ್ಕೆ ಬಂದಿದೆ. ಮಧು ನಾಪತ್ತೆಯಾಗಿದ್ದ. ಆತನ ಮೊಬೈಲ್ ಕೂಡಾ ಸ್ವಿಚ್ ಆಫ್ ಆಗಿತ್ತು.

ಮನೀಶ್ ಅವರು ಈ ವಿಷಯವನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ. ಪೊಲೀಸರು ಕ್ವಾಲೀಸ್ ಪರಿಶೀಲನೆ ನಡೆಸಿದಾಗ ಡೋರ್ ಲಾಕ್ ಮಾಡಲಾಗಿತ್ತು. ತಂತ್ರಜ್ಞರನ್ನು ಕರೆಸಿ ಲಾಕ್ ತೆರವು ಮಾಡಿ ಠಾಣೆಗೆ ಕೊಂಡೊಯ್ದಿದ್ದಾರೆ. ಮಧು ಮನುವಿನ ಆಪ್ತನಾಗಿದ್ದು ಇವರ ಜತೆಗಿದ್ದ ಇನ್ನೂ ಕೆಲವು ಯುವಕರು ನಾಪತ್ತೆಯಾಗಿದ್ದಾರೆ. ಈ ಕೊಲೆಯನ್ನು ಮನು ಮತ್ತು ಆತನ ತಂಡ ನಡೆಸಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net