ಜುಲೈ 3ರಂದು ಸುಳ್ಯ ರೋಟರಿ ಕ್ಲಬ್ ಪದಗ್ರಹಣ

rotary
Published on

ಸುಳ್ಯ: ಸುಳ್ಯ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜುಲೈ 3ರಂದು ಸಂಜೆ 6.30ಕ್ಕೆ ರಥಬೀದಿಯ ರೋಟರಿ ಸಮುದಾಯ ಸಭಾಭವನದಲ್ಲಿ ನಡೆಯಲಿದೆ ಎಂದು ಸುಳ್ಯ ರೋಟರಿ ಕ್ಲಬ್‌ನ ನೂತನ ಅಧ್ಯಕ್ಷೆ ಯೋಗಿತ ಗೋಪಿನಾಥ್ ತಿಳಿಸಿದರು.

ಸುಳ್ಯ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪತಿ ರಾವ್ ಪದಗ್ರಹಣ ನೆರವೇರಿಸಲಿದ್ದಾರೆ. ಜೋನ್ 7ರ ಎಆರ್‌ಆರ್‌ಎಫ್‌ಸಿ ಕೆ.ಕೃಷ್ಣ ಶೆಟ್ಟಿ, ಜೋನ್ 5ರ ಅಸಿಸ್ಟೆಂಟ್ ಗವರ್ನರ್ ವಿನಯಕುಮಾರ್, ಜೋನಲ್ ಲೆಫ್ಟಿನೆಂಟ್ ಪ್ರಭಾಕರನ್ ನಾಯರ್.ಕೆ ಭಾಗವಹಿಸಲಿದ್ದಾರೆ ಎಂದರು.

ರೋಟರಿ ಕ್ಲಬ್ ಅಧ್ಯಕ್ಷ ಆನಂದ ಖಂಡಿಗ, ಕಾರ್ಯದರ್ಶಿ ಡಾ.ಹರ್ಷಿತಾ ಪುರುಷೋತ್ತಮ, ಕೋಶಾಧಿಕಾರಿ ಹರಿರಾಯ ಕಾಮತ್, ಉಪಾಧ್ಯಕ್ಷ ಡಾ.ರಾಮ್ ಮೋಹನ್, ಕ್ಲಬ್ ಸರ್ವೀಸ್ ಡೈರೆಕ್ಟರ್ ಎನ್.ಎ.ಜಿತೇಂದ್ರ, ಕಮ್ಯುನಿಟಿ ಸರ್ವೀಸ್ ಡೈರೆಕ್ಟರ್ ಸನತ್ ಪೆರಿಯಡ್ಕ, ಪಬ್ಲಿಕ್ ಇಮೇಜ್ ಡೈರೆಕ್ಟರ್ ಜೆ.ಕೆ.ರೈ, ಸದಸ್ಯ ಎಂ.ಪಿ.ಗೋಪಿನಾಥ್, ಬುಲೆಟಿನ್ ಎಡಿಟರ್ ಶೈಮಾ ಜಿತೇಂದ್ರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net