ಪತ್ನಿ ಕೊಂದು ಚೀಲದಲ್ಲಿ ತುಂಬಿಸಿ ಪತಿ ಪರಾರಿ!? ದಕ್ಷಿಣ ಕನ್ನಡದಲ್ಲಿ ಅಮಾನುಷ ಕೃತ್ಯ, ಮೃತಳ ಹಿನ್ನೆಲೆ ಸ್ಥಳೀಯರಿಗೂ ಗೊತ್ತಿಲ್ಲ…

Untitled-1
Published on

ಸುಳ್ಯ(ದಕ್ಷಿಣ ಕನ್ನಡ): ಪಟ್ಟಣದ ಮನೆಯೊಂದರಲ್ಲಿ ಮಹಿಳೆಯ ಮೃತದೇಹ ಗೋಣಿಚೀಲದಲ್ಲಿ ಪತ್ತೆಯಾಗಿದ್ದು, ಆಕೆಯ ಪತಿ ನಾಪತ್ತೆಯಾಗಿದ್ದಾನೆ.

ಆತನೇ ಪತ್ನಿಯನ್ನು ಕೊಲೆಗೈದು ಚೀಲದಲ್ಲಿ ತುಂಬಿಸಿಟ್ಟಿರುವ ಸಂಶಯ ವ್ಯಕ್ತವಾಗಿದೆ. ಪಶ್ಚಿಮ ಬಂಗಾಲ ಮೂಲದ ಇಮ್ರಾನ್​ ಎಂಬಾತ ಓಡಬಾಯಿ ಬಳಿ ಹೋಟೆಲೊಂದರಲ್ಲಿ ಆರು ತಿಂಗಳಿನಿಂದ ಕೆಲಸಕ್ಕಿದ್ದ. ಅಲ್ಲೇ ಸನಿಹದ ಬೀರಮಂಗಲದಲ್ಲಿ ಪತ್ನಿ ಜತೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಎರಡು ದಿನಗಳ ಹಿಂದಷ್ಟೇ ಊರಿಗೆ ಹೋಗುತ್ತೇನೆಂದು ಇಮ್ರಾನ್​ ರಜೆ ಮಾಡಿ ತೆರಳಿದ್ದ. ಆದರೆ ಹೋಗುವಾಗ ಹೆಂಡತಿಯನ್ನು ಕರೆದುಕೊಂಡು ಹೋಗಿರಲಿಲ್ಲ ಎನ್ನಲಾಗಿದೆ.

ಸ್ಥಳೀಯರು ಸಂಶಯಗೊಂಡು ಹೋಟೆಲ್​​ ಮಾಲೀಕರಿಗೆ ತಿಳಿಸಿದ್ದರು. ಬಳಿಕ ಪೊಲೀಸರ ಸಹಾಯದೊಂದಿಗೆ ಮಂಗಳವಾರ ಮನೆ ಪರಿಶೀಲಿಸಿದಾಗ ಪತ್ನಿಯ ಮೃತದೇಹ ಗೋಣಿಚೀಲದಲ್ಲಿ ತುಂಬಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಹಿಳೆಯ ಹೆಸರು, ಆಕೆ ಯಾವ ಧರ್ಮದವಳು ಎಂಬ ಮಾಹಿತಿ ಪೊಲೀಸರಿಗೂ ಲಭಿಸಿಲ್ಲ. ಆಕೆ ಹಿಂದಿ ಮಾತನಾಡುತ್ತಿದ್ದಳು ಎಂದು ಸ್ಥಳೀಯರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net