ಮರಕ್ಕೆ ರಿಕ್ಷಾ ಡಿಕ್ಕಿ, ನವಜಾತ ಶಿಶು ಮೃತ್ಯು

crime
Published on

ಸುಳ್ಯ: ಮರಕ್ಕೆ ರಿಕ್ಷಾ ಡಿಕ್ಕಿ ಹೊಡೆದ ಪರಿಣಾಮ, ರಿಕ್ಷಾದಲ್ಲಿದ್ದ 52 ದಿನಗಳ ಶಿಶು ಮೃತಪಟ್ಟ ಘಟನೆ ಬೇಂಗಮಲೆ ಎಂಬಲ್ಲಿ ನಡೆದಿದೆ.

ಬೆಳ್ಳಾರೆ ಕಲ್ಮಡ್ಕ ಬೊಳಿಯಾರು ನಿವಾಸಿ ಸತೀಶ್-ಆಶಾಲತಾ ದಂಪತಿ ಪುತ್ರ ಆಶೀಷ್ ಮೃತ ಮಗು.

ಅಸೌಖ್ಯ ಹಿನ್ನೆಲೆಯಲ್ಲಿ ಮಗುವನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ರಾತ್ರಿ ಮನೆಗೆ ಮರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ ರಿಕ್ಷಾ ಮರಕ್ಕೆ ಡಿಕ್ಕಿ ಹೊಡೆದಿತ್ತು. ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net