

ಮಂಗಳೂರು: ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಸಮೂಹ ಸಂಸ್ಥೆಯ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರಗಳ ಸಾಧಕ ಮಹಿಳೆಯರಿಗೆ ವಾರ್ಷಿಕ ನಾರಿ ಶಕ್ತಿ 2024 ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್‌ನ ಶೋ ರೂಮ್‌ನಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಎಕ್ಸ್‌ಪರ್ಟ್ ಸಮೂಹ ಸಂಸ್ಥೆಯ ಉಪಾಧ್ಯಕ್ಷೆ ಡಾ.ಉಷಾಪ್ರಭಾ ಎನ್.ನಾಯಕ್, ಉಳ್ಳಾಲ ನಗರ ಸಭೆಯ ವಲಯ ಆಯುಕ್ತೆ ವಾಣಿ ಆಳ್ವ, ಉದ್ಯಮಿ ವಾತಿಕಾ ಪೈ, ಅಂ.ರಾ. ಮೇಕಪ್ ಕಲಾವಿದೆ ಸಾಜಿದಾ ಹಾರಿಸ್, ಮಂಗಳೂರು ಲೇಡಿಸ್ ಕ್ಲಬ್ ಅಧ್ಯಕ್ಷೆ ಶೆರ್ಲಿ ಕುವೆಲ್ಲೋ, ಮಜೀದ್ ಫಾರ್ಮ್ಸ್‌ನ ಮಾಲಕಿ ಮೈಮೂನ, ಪ್ರಸೂತಿ ತಜ್ಞೆ ಡಾ.ಆಯಿಷತ್ ಸಪೂರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸುಲ್ತಾನ್ ಡೈಮಂಡ್ಸ್ ಮತ್ತು ಗೋಲ್ಡ್‌ನ ನಿರ್ದೇಶಕಿ ಮೆಹರುನ್ನೀಸಾ ರವೂಫ್ ಅವರು ಪ್ರಶಸ್ತಿ ಪ್ರದಾನಗೈದರು.