ಗ್ರಾಹಕರಿಗೆ ಮೆಚ್ಚುಗೆಯಾಗುವ ಆಭರಣಗಳನ್ನು ನೀಡುವ ಸಂಸ್ಥೆ- ಡಾ. ಎ.ಎಸ್. ಹಬೀನಾ ಶೈರಾ ಬಣ್ಣನೆ - ಸುಲ್ತಾನ್ ಡೈಮಂಡ್ ಆಂಡ್ ಗೋಲ್ಡ್ ಶೋರೂಂನಲ್ಲಿ ವ್ರಜಾಭರಣ ಪ್ರದರ್ಶನ

PTR_5 SEP_4
Published on

ಪುತ್ತೂರು: ಸುಲ್ತಾನ್ ಶೋರೂಂ ಆಭರಣಗಳ ಉತ್ತಮ ಸಂಗ್ರಹ ಹೊಂದಿದ್ದು, ಗ್ರಾಹಕರಿಗೆ ಮೆಚ್ಚುಗೆಯಾಗುವ ಆಭರಣಗಳನ್ನು ನೀಡಲು ಪ್ರತಿ ಹಂತದಲ್ಲಿ ಪ್ರಯತ್ನಿಸುತ್ತಾರೆ. ಮನಸ್ಸಿನಲ್ಲಿರುವ ಆಭರಣಗಳ ಶೈಲಿಯನ್ನು ಹೇಳಿದರೆ ಅದನ್ನು ನೀಡುವಲ್ಲಿ ಹೆಚ್ಚಿನ ಒತ್ತು ನೀಡುತ್ತಾರೆ. ಸಿಬ್ಬಂದಿ ಗ್ರಾಹಕರಿಗೆ ಹೆಚ್ಚಿನ ಮಹತ್ವ ನೀಡುವ ಮೂಲಕ ಸಂಸ್ಥೆಯ ಯಶಸ್ಸಿಗೆ ಕಾರಣರಾಗಿದ್ದಾರೆ ಎಂದು ಮಧುಮೇಹ ತಜ್ಞೆ ಡಾ. ಎ.ಎಸ್. ಹಬೀನಾ ಶೈರಾ ಹೇಳಿದರು.

ಪುತ್ತೂರು ಏಳ್ಮುಡಿಯ ಸುಲ್ತಾನ್ ಡೈಮಂಡ್ ಆಂಡ್ ಗೋಲ್ಡ್ ಶೋರೂಂನಲ್ಲಿ ದಕ್ಷಿಣ ಭಾರತದ ಪ್ರೀಮಿಯರ್ ವ್ರಜಾಭರಣ ಪ್ರದರ್ಶನ ವಿಶ್ವ ವಜ್ರ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿವಿಧ ನಮೂನೆಯ ಆಭರಣಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.

ವಿಕ್ಟೋರಿಯಾ ಜೋನಲ್ ಕ್ಲಬ್ ಸದಸ್ಯೆ ಆಶಾ ಡಿಸೋಜ ಮಾತನಾಡಿ ಸುಲ್ತಾನ್‌ನಲ್ಲಿ ಗ್ರಾಹಕರಿಗೆ ಸಿಗುತ್ತಿರುವ ಸೇವೆ ಬಹಳಷ್ಟು ತೃಪ್ತಿಯನ್ನು ನೀಡಿದೆ. ಕಳೆದ ೩ ವರ್ಷಗಳಿಂದ ಈ ಮಳಿಗೆಯಲ್ಲಿನ ಗ್ರಾಹಕಿಯಾಗಿದ್ದೇನೆ. ಗ್ರಾಹಕರು ಈ ಸಂಸ್ಥೆಗೆ ಹೆಚ್ಚಿನ ಬೆಂಬಲ ನೀಡಬೇಕು. ಆ ಮೂಲಕ ಸುಲ್ತಾನ್ ಗೋಲ್ಡ್ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ಎಂದರು.

ಶಿಕ್ಷಕಿ ಇಂದಿರಾ ಭಂಡಾರಿ ಮಾತನಾಡಿ ಅತ್ಯಲ್ಪ ಕಾಲದಲ್ಲಿಯೇ ಸುಲ್ತಾನ್ ಸಂಸ್ಥೆ ತನ್ನಂತಹ ಹಲವಾರು ಗ್ರಾಹಕರ ಮನಸ್ಸು ಗೆದ್ದಿದೆ. ಇಲ್ಲಿ ಉತ್ತಮ ವಜ್ರಾಭರಣಗಳ ಸಂಗ್ರಹವಿದೆ. ಜತೆಗೆ ಗ್ರಾಹಕರ ಬೇಡಿಕೆಗಳಿಗೆ ಇಲ್ಲಿ ಉತ್ತಮ ಸ್ಪಂದನೆ ನೀಡುತ್ತಾರೆ ಎಂದು ತಿಳಿಸಿದರು.


ಗ್ರಾಹಕರಾದ ಅನ್ಲೆನ್ ಡಿಸೋಜ ಮಾತನಾಡಿ ನಂಬಿಕೆ ಮತ್ತು ಭರವಸೆಗಳಿಗೆ ಸುಲ್ತಾನ್ ಡೈಮಂಡ್ಸ್ ಆಂಡ್ ಗೋಲ್ಡ್ ಮಳಿಗೆ ಇನ್ನೊಂದು ಹೆಸರಾಗಿದೆ ಎಂದರು.


ಸುಷ್ಮಾ ವಿ. ಜೈನ್ ವಿಜಯವನ, ಸುಮಯ್ಯ ನವಾಝ್, ನಶ್ರತ್ ಬಶೀರ್, ಶಿಕ್ಷಕಿ ಪ್ರೇಮಾ, ಗ್ರಾಹಕರಾದ ಆಶ್ಲಿನ್ ಡಿಸೋಜ, ಜಾನ್ ಡಿಸೋಜ, ಸಂಸ್ಥೆಯ ಬ್ರಾಂಚ್ ಮ್ಯಾನೇಜರ್ ಕೆ.ಎಸ್. ಮುಸ್ತಫಾ ಕಕ್ಕಿಂಜೆ, ಅಸಿಸ್ಟೆಂಟ್ ಮ್ಯಾನೇಜರ್ ಬಾಬು, ಮಾರ್ಕೆಟಿಂಗ್ ಮ್ಯಾನೇಜರ್ ಮಹಮ್ಮದ್ ಅಮ್ರಾಝ್ ಉಪಸ್ಥಿತರಿದ್ದರು. ಚೈತನ್ಯ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.


ವಜ್ರ ಆಭರಣದ ಸಂಗ್ರಹ!
ವಿಶ್ವ ವಜ್ರ ಕಾರ್ಯಕ್ರಮದಲ್ಲಿ ಇಟಲಿ, ಫ್ರಾನ್ಸ್, ಟರ್ಕಿ, ಬೆಲ್ಜಿಯಂ, ಯು.ಎಸ್., ಸಿಂಗಾಪುರ, ಮಧ್ಯಪ್ರಾಚ್ಯದಿಂದ ಪ್ರಮಾಣೀಕೃತ ವಜ್ರದ ಆಭರಣ ಸಂಗ್ರಹಗಳ ೧೦ ಸಾವಿರ ಕ್ಯಾರೆಟ್ ಸ್ಟಾಕ್ ಪ್ರದರ್ಶಿಸಲಾಗುತ್ತಿದೆ. ಪ್ರದರ್ಶನ ವ್ಯಾಪಕ ಶ್ರೇಣಿಯ hqsಟಞಜಿ ಐಷಾರಾಮಿ ಡೈಮಂಡ್‌ಗಳನ್ನು ಹೊಂದಿದೆ. ಸೆ.೧೫ರವರೆಗೆ ಡೈಮಂಡ್ ಕ್ಯಾರೆಂಟ್‌ಗೆ ಪ್ಲಾಟ್ ೮ ಸಾವಿರ ರೂ. ರಿಯಾಯಿತಿಯನ್ನು ಪಡೆಯಬಹುದಾಗಿದೆ.


ವಿವಿಧ ವಿನ್ಯಾಸ:
ಸಾಲಿಟೇರ್ ಕಲೆಕ್ಷನ್, ಸಾಂಪ್ರದಾಯಿಕ ಕ್ಲೋಸ್ ಸೆಟ್ಟಿಂಗ್ ಸಂಗ್ರಹ, ತನ್ಮಾನಿಯಾ ಸಂಗ್ರಹಗಳು, ವಧುವಿನ ವಜ್ರ ಆಭರಣ ಸಂಗ್ರಹಗಳು, ಕತ್ತರಿಸದ ವಜ್ರಗಳು ಮತ್ತು ರೂಬಿ ಎಮರಾಲ್ಡ್ ರತ್ನದ ಸಂಗ್ರಹಗಳಿದೆ. ಕೈಗೆಟಕುವ ದೈನಂದಿನ ಉಡುಗೆ ವಜ್ರಗದ ಸಂಗ್ರಹಣೆ, ೮೦ಸಾವಿರದಿಂದ ಪ್ರಾರಂಭವಾಗುವ ಡೈಲಿ ವೇರ್ ಲೈಟ್ ವೈಟ್ ಡೈಮಂಡ್ ನೆಕ್ಲೇಸ್ ಗಳು, ೩೫ ಸಾವಿರದಿಂದ ಪ್ರಾರಂಭವಾಗುವ ಲೈಟ್‌ವೆಯ್ಟ್ ಡೈಮಂಡ್ ಬ್ಯಾಂಗಲ್, ೮ ಸಾವಿರದಿಂದ ಪ್ರಾರಂಭವಾಗುವ ಡೈಮಂಡ್ ರಿಂಗ್‌ಗಳು ಲೈಟ್‌ವೆಯ್ಟ್ ಸಂಗ್ರಹಗಳಲ್ಲಿ ಲಭ್ಯವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net