

ಸುಳ್ಯ: ಸುಳ್ಯ ಭಸ್ಮಡ್ಕ ಪಯಸ್ವಿನಿ ನದಿಯಲ್ಲಿ ಭಾನುವಾರ ಸ್ನಾನಕ್ಕೆ ಬಂದ ಮೂವರು ಯುವಕರ ಪೈಕಿ ಉಪ್ಪಳ ನಿವಾಸಿ ಸಮೀರ್(28) ಎಂಬುವರು ನೀರುಪಾಲಾಗಿದ್ದಾರೆ.
ಭಾನುವಾರ ಬೆಳಗ್ಗೆ ಸಮೀರ್ ಸೇರಿದಂತೆ ಮೂವರು ಯುವಕರು ಭಸ್ಮಡ್ಕ ಬಳಿ ಪಯಸ್ವಿನಿ ನದಿಗೆ ಸ್ನಾನಕ್ಕೆ ತೆರಳಿದ್ದರು. ಈ ವೇಳೆ ನದಿ ನೀರಿನಲ್ಲಿ ಸಮೀರ್ ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ. ಅಗ್ನಿಶಾಮಕ ದಳ, ಪೈಚಾರು ಮುಳುಗು ತಜ್ಞರು ಶೋಧ ನಡೆಸಿ ಮೃತದೇಹ ಪತ್ತೆ ಹಚ್ಚಿದ್ದಾರೆ. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.