ಕೆಲಸ ಕೇಳಿಕೊಂಡು ಬಂದಾತ ಮೊಬೈಲ್, ಬೈಕ್ ಹೊತ್ತೊಯ್ದ!

FIR-2
Published on


ಸುಳ್ಯ: ಕೆಲಸ ಕೇಳಿಕೊಂಡು ಬಂದಾತ ಮೊಬೈಲ್ ಫೋನ್ ಮತ್ತು ಬೈಕ್ ಕಳವು ಮಾಡಿ ಪರಾರಿಯಾಗಿರುವ ಘಟನೆ ಸುಳ್ಯ ಅರಂತೋಡಿನಲ್ಲಿ ಬುಧವಾರ ನಡೆದಿದೆ.
ಬೆಳ್ತಂಗಡಿ ಮೂಲದ ರಿಯಾಜ್ ಅರಂತೋಡಿನ ಹೋಟೆಲ್‌ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದು ಅವರಲ್ಲಿಗೆ ಅವರ ಪರಿಚಯದ ಹೃಷಿಕೇಶ್ ಎಂಬಾತ ಕೆಲಸ ಕೇಳಿಕೊಂಡು ಬಂದಿದ್ದಾನೆ. ಆತನನ್ನು ರಿಯಾಜ್ ಹೋಟೆಲ್‌ಗೆ ಕರೆದುಕೊಂಡು ಹೋಗಿದ್ದು ಮಧ್ಯಾಹ್ನ ರಿಯಾಜ್ ವಿಶ್ರಾಂತಿ ಪಡೆಯಲು ಮಲಗಿದ್ದನು. 2 ಗಂಟೆಯ ಬಳಿಕ ಎದ್ದು ನೋಡಿದಾಗ ಹೃಷಿಕೇಶ್ ರೂಂನಲ್ಲಿ ಕಾಣಿಸಲಿಲ್ಲ. ಜತೆಗೆ ರಿಯಾಜ್ ಅವರಲ್ಲಿದ್ದ ಮೊಬೈಲ್ ಫೋನ್ ಹಾಗೂ ದ್ವಿಚಕ್ರ ವಾಹನ ಕಳವು ಮಾಡಿ ಪರಾರಿಯಾಗಿದ್ದಾನೆ. ಕಳ್ಳತನವಾದ ಸೊತ್ತುಗಳ ಒಟ್ಟು ಮೌಲ್ಯ 75,000 ರೂ. ಎಂದು ಅಂದಾಜಿಸಲಾಗಿದೆ. ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net