ಸುಳ್ಯ ಮರ್ಕಂಜ ಭಾಗದಲ್ಲಿ ಭೂ ಕಂಪನ

IMG_20221009_103954
Published on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮರ್ಕಂಜ ಭಾಗದಲ್ಲಿ ಭಾನುವಾರ ಮುಂಜಾನೆ 5.25ರ ವೇಳೆಗೆ ಭಾರೀ ಶಬ್ದದೊಂದಿಗೆ ಭೂ ಕಂಪನದ ಅನುಭವವಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ಮರ್ಕಂಜ ಭಾಗದ ಕೆಲವು ಕಡೆ ಹಾಗೂ ನೆಲ್ಲೂರು ಕೆಮ್ರಾಜೆ ಗ್ರಾಮದ ಕೆಲವು ಕಡೆಗಳಲ್ಲಿ ಈ ಅನುಭವವಾಗಿದ್ದು, ಭಾರೀ ಶಬ್ದ ಉಂಟಾಗಿ ಸುಮಾರು 5-6 ಸೆಕೆಂಡು ಕಂಪನವಾದ ಅನುಭವವಾಗಿದೆ ಎಂದು ತಿಳಿದು ಬಂದಿದೆ.

ಎರಡು ತಿಂಗಳ ಹಿಂದೆ ಪೆರಾಜೆ, ಸಂಪಾಜೆ ಭಾಗದಲ್ಲಿ ಹಲವು ಬಾರಿ ಭೂ ಕಂಪನಾನುಭವವಾಗಿತ್ತು. ಈ ಬಗ್ಗೆ ತಜ್ಞರು ಆಗಮಿಸಿ ಅಧ್ಯಯನ ನಡೆಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net