ಚಾಲಕನ ನಿಯಂತ್ರಣ ತಪ್ಪಿಲಾರಿ ಪಲ್ಟಿ

accident
Published on

ಸುಳ್ಯ: ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ತಿರುವಿನಲ್ಲಿ ಪಲ್ಟಿಯಾಗಿ, ಚಾಲಕ ಸಣ್ಣಪುಟ್ಟ ಗಾಯಗೊಂಡ ಘಟನೆ ಕನಕಮಜಲು ಗ್ರಾಮದ ಆನೆಗುಂಡಿ ತಿರುವಿನಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದೆ. ಮೈಸೂರಿನಿಂದ ಮಂಗಳೂರಿಗೆ ಟೊಮ್ಯಾಟೊ ಹೊತ್ತೊಯ್ಯತ್ತಿದ್ದ ಲಾರಿ ಆನೆಗುಂಡಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸಮೀಪದ ಕಂದಕಕ್ಕೆ ಉರುಳಿ ಪಲ್ಟಿಯಾಗಿದ್ದು, ಪರಿಣಾಮವಾಗಿ ಚಾಲಕ ಸಣ್ಣಪುಟ್ಟ ಗಾಯಗೊಂಡಿದ್ದ. ಗಾಯಾಳುವನ್ನು ಸ್ಥಳೀಯರು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ಲಾರಿಯನ್ನು ಕ್ರೇನ್ ಮೂಲಕ ಮೇಲೆತ್ತಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net