ಸದೃಢ ಸಮಾಜ ನಿರ್ಮಾಣದಲ್ಲಿ ಇಂಜಿನಿಯರ್‌ಗಳ ಪಾತ್ರ : ಡಾ.ಟಿ.ಎನ್.ಶ್ರೀನಿವಾಸ ಆಶಯ

kvg
ಸುಳ್ಯ ಕೆ.ವಿ.ಜಿ.ತಾಂತ್ರಿಕ ಮಹಾ ವಿದ್ಯಾಲಯದ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಡಾ.ಟಿ.ಎನ್.ಶ್ರೀನಿವಾಸ ಪದವಿ ಪ್ರದಾನ ಮಾಡಿ ಮಾತನಾಡಿದರು. ಡಾ.ರೇಣುಕಾಪ್ರಸಾದ್ ಕೆ.ವಿ, ಡಾ.ತಿಪ್ಪೇಸ್ವಾಮಿ ಜಿ., ಡಾ.ಜ್ಯೋತಿ ಆರ್.ಪ್ರಸಾದ್ ಮೊದಲಾದವರಿದ್ದರು.
Published on

ಸುಳ್ಯ: ಸದೃಢ ಸಮಾಜದ ನಿರ್ಮಾಣದಲ್ಲಿ ಇಂಜಿನಿಯರ್‌ಗಳ ಪಾತ್ರ ಮಹತ್ತರ. ಕಲಿತ ಶಿಕ್ಷಣವನ್ನು ದೇಶದ ಅಭಿವೃದ್ಧಿಗೆ, ಸಮಾಜದ ಉನ್ನತಿಗಾಗಿ ಬಳಸಿಕೊಳ್ಳಿ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ರಿಜಿಸ್ಟ್ರಾರ್(ಮೌಲ್ಯಮಾಪನ) ಡಾ.ಟಿ.ಎನ್.ಶ್ರೀನಿವಾಸ ಹೇಳಿದರು.

ಅಮರಶ್ರೀ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ, ಸುಳ್ಯ ಕೆ.ವಿ.ಜಿ. ತಾಂತ್ರಿಕ ಮಹಾ ವಿದ್ಯಾಲಯದ 2023-24ನೇ ಸಾಲಿನ ಅಂತಿಮ ವರ್ಷದ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಒಎಲ್‌ಇಯ ಕಮಿಟಿ ‘ಬಿ’ ಯ ಅಧ್ಯಕ್ಷ ಡಾ.ರೇಣುಕಾಪ್ರಸಾದ್ ಕೆ.ವಿ. ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಬಿ.ಎಂ.ಎಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮ್ಯಾನೇಜ್‌ಮೆಂಟ್‌ನ ಡಾ.ತಿಪ್ಪೇಸ್ವಾಮಿ ಜಿ., ಎಒಎಲ್‌ಇಯ ಕಮಿಟಿ ‘ಬಿ’ ಕಾರ್ಯದರ್ಶಿ ಡಾ.ಜ್ಯೋತಿ ಆರ್.ಪ್ರಸಾದ್, ಕೆ.ವಿ.ಜಿ. ಕಾಲೇಜ್ ಆಫ್ ಇಂಜಿನಿಯರಿಂಗ್‌ನ ಸಿ.ಇ.ಒ ಡಾ.ಉಜ್ವಲ್ ಯು.ಜೆ, ಕಾಲೇಜಿನ ಪ್ರಾಂಶುಪಾಲ ಡಾ.ಸುರೇಶ ವಿ., ಉಪಪ್ರಾಂಶುಪಾಲ ಡಾ.ಶ್ರೀಧರ್ ಕೆ., ಕಾಲೇಜಿನ ಗವರ್ನಿಂಗ್ ಕೌನ್ಸಿಲ್ ಸದಸ್ಯ ಸಂತೋಷ್ ಜಾಕೆ, ವಿಟಿಯು ಬೆಳಗಾವಿ ಮಂಗಳೂರು ವಿಭಾಗದ ಮುಖ್ಯಾಧಿಕಾರಿ ಡಾ.ಶಿವಕುಮಾರ್, ಕಾಲೇಜಿನ ಪ್ರಾಂಶುಪಾಲ ಡಾ.ಸುರೇಶ ವಿ. ಶುಭ ಹಾರೈಸಿದರು.

ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಉಪಪ್ರಾಂಶುಪಾಲ ಡಾ.ಶ್ರೀಧರ್ ಕೆ.ವಂದಿಸಿ, ಪ್ರೊ.ಭವ್ಯಾ ಪಿ.ಎಸ್.ಮತ್ತು ಪ್ರೊ.ಅಶ್ವಿಜಿಯಾ ಕಾರ್ಯಕ್ರಮ ನಿರೂಪಿಸಿದರು.

ಪ್ರಮುಖರಾದ ನಿತ್ಯಾನಂದ ಮುಂಡೋಡಿ, ಎನ್.ಎ.ರಾಮಚಂದ್ರ ದಯಾನಂದ ಕುರುಂಜಿ, ಅಮರ ಜ್ಯೋತಿ ಪ್ರಾಂಶುಪಾಲೆ ಯಶೋದಾ ರಾಮಚಂದ್ರ, ಐಟಿಐ ಪ್ರಾಂಶುಪಾಲ ಚಿದಾನಂದ ಬಾಳಿಲ, ಕೆವಿಜಿ ಐಪಿಎಸ್ ಪ್ರಾಂಶುಪಾಲ ಅರುಣ್ ಕುಮಾರ್, ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಆಡಳಿತಾಧಿಕಾರಿ ನಾಗೇಶ್ ಕೊಚ್ಚಿ ಉಪಸ್ಥಿತರಿದ್ದರು.

ಪದವಿ ಪೂರ್ತಿ ಮಾಡುವುದು ಜೀವನದ ಮಹತ್ವದ ಘಟ್ಟ. ವೃತ್ತಿ ಜೀವನದಲ್ಲಿ ಹೆಚ್ಚು ಪರಿಶ್ರಮಪಟ್ಟು ಯಶಸ್ವಿಯಾಗುವುದರ ಜತೆಗೆ, ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು.- ಡಾ.ರೇಣುಕಾಪ್ರಸಾದ್ ಕೆ.ವಿಎಒಎಲ್‌ಇಯ ಕಮಿಟಿ ‘ಬಿ’ ಅಧ್ಯಕ್ಷ https://www.vijayavani.net/konkan-railway-monsoon-timetable https://www.vijayavani.net/lorry-collides-with-bike-rider-dies

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net