ಸಮಾಜ ಕಲ್ಯಾಣ ಇಲಾಖೆಯ ಆರ್ಶಿಯ ಅವರಿಗೆ ಡಾಕ್ಟರೇಟ್

WhatsApp Image 2023-09-02 at 16.37.44
Published on

ಪುತ್ತೂರು: ಸುಳ್ಯದ ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯದಲ್ಲಿ ವಾರ್ಡನ್ ಆಗಿರುವ ಆರ್ಶಿಯ ಅವರಿಗೆ ಮಂಗಳೂರು ವಿಶ್ವ ವಿದ್ಯಾನಿಲಯದಿಂದ ಡಾಕ್ಟರೇಟ್ ನೀಡಿದೆ.

ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಸಹಾಯಕ ಪ್ರಾದ್ಯಾಪಕ ಡಾ.ನಾಗಪ್ಪ ಗೌಡ ಆರ್ ಮಾರ್ಗದರ್ಶನದಲ್ಲಿ "ಕರಾವಳಿ ಕನ್ನಡ ಮುಸ್ಲಿಂ ಕಥನ ಸಾಹಿತ್ಯದಲ್ಲಿ ಸ್ತ್ರೀತ್ವದ ಪ್ರತಿನಿಧಿಕರಣ" ವಿಷಯವಾಗಿ ಸಲ್ಲಿಸಿದ ಮಹಾ ಪ್ರಭಂದಕ್ಕೆ ಈ ಡಾಕ್ಟರೇಟ್ ದೊರತಿದೆ. ಮಂಗಳೂರಿನ ಎಸ್.ಎಂ ಇಬ್ರಾಹಿಂ ಮತ್ತು ತಾಹಿರಾ ದಂಪತಿಗಳ ಪುತ್ರಿಯಾದ ಇವರು ಕಳೆದ ಕೆಲವು ವರ್ಷದಿಂದ ಸುಳ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net