ಆರೋಗ್ಯ ಶಿಬಿರ ಮಧ್ಯಮ ವರ್ಗಕ್ಕೆ ವರದಾನ

sulibele health camp
???????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ವಿಜಯವಾಣಿ ಸುದ್ದಿಜಾಲ ಸೂಲಿಬೆಲೆ
ಸ್ಥಳೀಯ ಸಂಸ್ಥೆಗಳು ಹಾಗೂ ಖಾಸಗಿ ಅಸ್ಪತ್ರೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳುವ ಆರೋಗ್ಯ ತಪಾಸಣೆ ಶಿಬಿರಗಳು ಮಧ್ಯಮ ವರ್ಗದ ಜನತೆಗೆ ವರದಾನವಾಗಿದೆ ಎಂದು ರಾಜ್ಯ ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕ ಬಿ.ಎನ್.ಗೋಪಾಲಗೌಡ ಹೇಳಿದರು.
ಹೋಬಳಿಯ ಹಸಿಗಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಕ್ಕೊಂಡಹಳ್ಳಿ ಗ್ರಾಪಂ ಹಾಗೂ ವೈದೇಹಿ ಅಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.
ಪ್ರತಿಯೊಬ್ಬ ವ್ಯಕ್ತಿ 6 ತಿಂಗಳಿಗೊಮ್ಮೆಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ತುರ್ತು ಚಿಕಿತ್ಸೆಗಳನ್ನು ಪಡೆಯುವುದು ಮುಖ್ಯವಾಗಿದ್ದು, ಆರೋಗ್ಯ ವಿಚಾರವಾಗಿ ಯಾರೂ ಅಸಡ್ಡೆ ತೋರಬಾರದು ಎಂದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ಸತೀಶಗೌಡ ಮಾತನಾಡಿ, ಗ್ರಾಮೀಣ ಭಾಗದ ಜನತೆಯ ಆರೋಗ್ಯ ದೃಷ್ಟಿಯಿಂದ ಶಿಬಿರ ಹಮ್ಮಿಕೊಂಡಿದ್ದು, ಹೃದಯರೋಗ, ನರರೋಗ, ಕಿಡ್ನಿಯಲ್ಲಿ ಕಲ್ಲು, ಮೂತ್ರಕೋಶ ಸಂಬಂಧಿಸಿದ ಸಮಸ್ಯೆ, ಕ್ಯಾನ್ಸರ್, ಮೂಳೆ ಶಾಸ್ತ್ರ, ಸ್ರೀರೋಗ, ಕಿವಿ, ಮೂಗು, ಗಂಟಲು ರೋಗಗಳ ನುರಿತ ವೈದ್ಯರಿಂದ ತಪಾಸಣೆ ಹಾಗೂ ಚಿಕಿತ್ಸೆ ಉಚಿತವಾಗಿ ನೀಡಲಾಗುತ್ತದೆ ಎಂದರು.
ಲಕ್ಕೊಂಡಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಮಾತನಾಡಿ, ಆರೋಗ್ಯ ಶಿಬಿರಗಳು, ತಪಾಸಣೆ ಹಾಗೂ ಚಿಕಿತ್ಸೆ ಜತೆಯಲ್ಲಿ ಸಾರ್ವಜನಿಕರ ರೋಗಗಳ ಜಾಗೃತಿ ಮೂಡಿಸುವ ಕೆಲಸವೂ ವೈದ್ಯರು ಮಾಡುತ್ತಾರೆ. ಪ್ರಸ್ತುತ ಹವಾಮಾನ ವೈಪರೀತ್ಯದಿಂದ ಉಂಟಾಗುವ ರೋಗಗಳ ಬಗ್ಗೆ ಅರಿವು ಮೂಡಿಸಿ, ಔಷದೋಪಚಾರ ನೆಡಸಲಾಗುತ್ತದೆ ಎಂದರು.
ಗ್ರಾಪಂ ಅಧ್ಯಕ್ಷ ಬೈರೇಗೌಡ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ಸತೀಶಗೌಡ, ಯುವ ಮುಖಂಡ ಜಿ.ನಾರಾಯಣಗೌಡ, ಮಾಜಿ ಅಧ್ಯಕ್ಷ ರಾಧಾಕೃಷ್ಣ, ಉಪಾಧ್ಯಕ್ಷೆ ಮುನಿಯಮ್ಮ, ಲಲಿತಮ್ಮ, ಮಂಜುನಾಥ್, ಪಿಡಿಒ ಸುಂದರ್, ವೈದೇಹಿ ಆಸ್ಪತ್ರೆ ಡಾ.ವಿಶ್ವನಾಥ್, ಸೋಮಸುಂದರ್, ಲಾರಿಕೃಷ್ಣಪ್ಪ, ಮುನಿನಂಜೇಗೌಡ, ನಾರಾಯಣಸ್ವಾಮಿ, ಶಿವರಾಜ್, ಭಾರತಿ ದೇವರಾಜ್, ವಿನಯ್, ಹೇಮಣ್ಣ, ಹಸಿಗಾಳ ಜಗದೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net