

ವಿಜಯವಾಣಿ ಸುದ್ದಿಜಾಲ ಸೂಲಿಬೆಲೆ
ಎರಡು ವಾರಗಳಿಗಿಂತ ಹೆಚ್ಚು ದಿನ ಕೆಮ್ಮಿದ್ದರೆ ಕ ಮಾದರಿಯನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿಕೊಳ್ಳುವ ಮೂಲಕ ಕ್ಷಯರೋಗಮುಕ್ತ ಭಾರತಕ್ಕೆ ಮುಂದಾಗಬೇಕು ಎಂದು ಹೊಸಕೋಟೆ ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಗುರುರಾಜ್ ಹೇಳಿದರು.
ಹೋಬಳಿಯ ಬೆಂಡಿಗಾನಹಳ್ಳಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಕ್ಷಯರೋಗ ಪತ್ತೆ ಹಚ್ಚುವ ಆಂದೋಲನದಲ್ಲಿ ಮಾತನಾಡಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ರ್ಜನಾ ಪರ್ವಿನ್ ಮಾತನಾಡಿ, ಸರ್ಕಾರದ ಆದೇಶದಂತೆ ಜನರಲ್ಲಿ ಕ್ಷಯ ರೋಗದ ಬಗ್ಗೆ ಜಾಗೃತಿ ಮೂಡಿಸುವ ಜತೆಗೆ 2025ಕ್ಕೆ ಕ್ಷಯರೋಗಮುಕ್ತ ಭಾರತ ನಿರ್ಮಾಣದ ಗುರು ಇದೆ ಎಂದರು.
ಬೆಂಡಿಗಾನಹಳ್ಳಿ ಆರೋಗ್ಯ ಕೇಂದ್ರ ಆರೋಗ್ಯ ನೀರೀಕ್ಷಣಾಧಿಕಾರಿ ಶಿವಕುಮಾರ್ ಮಾತನಾಡಿ, ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಪ್ರಸ್ತುತ 4 ಕ್ಷಯರೋಗಿಗಳಿದ್ದು, ನಿಗದಿತವಾಗಿ ಔಷದೋಪಚಾರ ನೆಡೆಯುತ್ತಿದೆ ಎಂದರು.
ತಾಲೂಕು ಕ್ಷಯರೋಗ ಘಟಕದ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಸುದೀಪ್, ಪ್ರಯೋಗಶಾಲಾ ತಂತ್ರಜ್ಞಾನಾಧಿಕಾರಿ ಚಂದ್ರಪ್ರಭಾ ಇತರರು ಇದ್ದರು.