ಸೂಲಿಬೆಲೆ ಕಾರ್ಯಕ್ರಮ ನಿರ್ಬಂಧಕ್ಕೆ ಹೈಕೋರ್ಟ್ ತೆರವು: ನಿಗದಿಯಂತೆ ನಡೆಯಲಿದೆ ಕಾರ್ಯಕ್ರಮ

chakravarthy sulibele
Published on

ಕಲಬುರಗಿ: ಚಿತ್ತಾಪುರದಲ್ಲಿ ನಮೋ ಭಾರತ್ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಹೇರಿದ್ದ ನಿರ್ಬಂಧ ಆದೇಶಕ್ಕೆ ಹೈಕೋರ್ಟ್ ತೆರವುಗೊಳಿಸಿ ಆದೇಶಿಸಿದೆ.

ಚಿತ್ತಾಪುರದಲ್ಲಿ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ನಡೆಯಲಿರುವ ನಮೋ ಭಾರತ ಕಾರ್ಯಕ್ರಮಕ್ಕೆ ಅನುಮತಿ ನೀಡದೆ, ಸೂಲಿಬೆಲೆ ಅವರ ಜಿಲ್ಲಾ ಪ್ರವೇಶಕ್ಕೆ ತಡೆ ನೀಡಿ ಉಪ ವಿಭಾಗಾಧಿಕಾರಿ ಆದೇಶ ಹೊರಡಿಸಿದ್ದರು.

ಇದನ್ನು ಪ್ರಶ್ನಿಸಿ ಚಕ್ರವರ್ತಿ ಸೂಲಿಬೆಲೆ ಅವರ ತಂಡ ಹೈಕೋರ್ಟ್ ಮೊರೆ ಹೋಗಿತ್ತು. ಹೈಕೋರ್ಟ್ ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಶ್ರೀಶಾನಂದ ವಿಚಾರಣೆ ನಡೆಸಿ, ನಿರ್ಬಂಧ ಆದೇಶವನ್ನು ತೆರವುಗೊಳಿಸಿ ಆದೇಶಿಸಿದ್ದಾರೆ.

ಪೊಲೀಸರು ನೀಡಿದ ನಿಯಮದಂತೆ ಕಾರ್ಯಕ್ರಮ ಮಾಡಬೇಕು. ಜಿಲ್ಲಾ ಪ್ರವೇಶ ನಿರ್ಬಂಧ ಹೇರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ಭಾರತ್ ಮಾತಾಕೀ ಜೈ ಎನ್ನೋಣ: ಹೈಕೋರ್ಟ್ ಆದೇಶ ಹೊರ ಬೀಳುತ್ತಿದ್ದಂತೆ ವಿಡಿಯೋ ಬಿಡುಗಡೆ ಮಾಡಿರುವ ಚಕ್ರವರ್ತಿ ಸೂಲಿಬೆಲೆ ನಿಗಧಿತ ಸಮಯಕ್ಕೆ ಕಾರ್ಯಕ್ರಮ ನಡೆಯಲಿದೆ. ಎಲ್ಲ ದೇಶಪ್ರೇಮಿಗಳು ಬನ್ನಿ ಭಾರತ ಮಾತಾ ಕೀ ಜೈ ಎನ್ನೋಣ ಎಂದು ಆಹ್ವಾನ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net