

ಬೆಳಗಾವಿ: ತಾಲೂಕಿನ ಸುಳೇಭಾವಿ ಗ್ರಾಮದ ಶ್ರೀಮಹಾರಾಣಿ ದೇವಿಯ ಜಾತ್ರಾ ಮಹೋತ್ಸವ ಮಂಗಳವಾರ ಪಲ್ಲಕ್ಕಿ ಉತ್ಸವದೊಂದಿಗೆ ಅತ್ಯಂತ ಸಡಗರ-ಸಂಭ್ರಮದಿಂದ ನೆರವೇರಿತು.
ಗ್ರಾಮದ ಶ್ರೀಮಹಾರಾಣಿಯ ಪಲ್ಲಕ್ಕಿ ಉತ್ಸವ ಅತ್ಯಂತ ಸಂಭ್ರಮದಿಂದ ನಡೆಯಿತು. ಬೆಳಗ್ಗೆ 6ಕ್ಕೆ ಶ್ರೀಮಹಾರಾಣಿ ದೇವಿಗೆ ಅಭಿಷೇಕ, ವಿಶೇಷ ಅಲಂಕಾರ, ಆರತಿ ಬೆಳಗಿ, ವಿಶೇಷ ಪೂಜೆ ಸಲ್ಲಿಸಲಾಯಿತು.
ನಂತರ ಪಲ್ಲಕ್ಕಿ ಉತ್ಸವ ಜತೆಗೆ ಗ್ರಾಮಸ್ಥರು ಸುಳೇಭಾವಿ ಗ್ರಾಮದ ಲಕ್ಷ್ಮೀ ಗಲ್ಲಿಯ ಶ್ರೀಯಲ್ಲಮ್ಮನ ದೇವಿಗೆ ಉಡಿ ತುಂಬಿ ನಂತರ ವಾದ್ಯ ಮೇಳದೊಂದಿಗೆ ಕಲ್ಮೇಶ್ವರ, ವೀರಭದ್ರೇಶ್ವರ, ಶಾಕಾಂಬರಿ, ಮಹಾಲಕ್ಷ್ಮೀ ದೇವಿ, ದುರ್ಗಾ ದೇವಿ, ಗಣಪತಿ, ವಿಠ್ಠಲ-ರುಕ್ಮಿಣಿ, ಹನುಮಾನ, ಬನಶಂಕರಿ, ಸಿದ್ದೇಶ್ವರ ದೇವರಿಗೆ ಪೂಜೆ ಸಲ್ಲಿಸಿ ನಂತರ ಶ್ರೀಮಹಾರಾಣಿ ದೇವಸ್ಥಾನಕ್ಕೆ ಆಗಮಿಸಿದರು.
ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ದೇವಿಗೆ ಉಡಿ ತುಂಬಿದ ಬಳಿಕ ಮುತ್ತೈದೆಯರಿಗೆ ಉಡಿ ತುಂಬುವ ವಿಶೇಷ ಕಾರ್ಯಕ್ರಮ ನೆರವೇರಿತು.
ಶ್ರೀ ಮಹಾರಾಣಿ ದೇವಸ್ಥಾನ ಟ್ರಸ್ಟ್ ಕಮಿಟಿ ಚೇರ್ಮನ್ ಶಿವಾಜಿ ಹುಂಕರಿಪಾಟೀಲ, ಬಸನಗೌಡ ಹುಂಕರಿಪಾಟೀಲ, ಅಣ್ಣಪ್ಪ ಪಾಟೀಲ, ಸದು ಲಖನಗೌಡ, ಲಕ್ಷ್ಮಣ ಮೋಳಗಿ, ಬಸವಂತ ನಿಂಗನಗೌಡ, ರಾಮ ಹುಂಕರಿಪಾಟೀಲ, ದೇವಪ್ಪ ನಿಂಗನಗೌಡ, ಮಾರುತಿ ಲಖನಗೌಡ, ನಾಗಪ್ಪ ನಗಾರಿಪಾಟೀಲ, ಅನಿಲ್ ನಿಂಗನಗೌಡ ಸೇರಿದಂತೆ ಇತರರಿದ್ದರು.