

ಉಳವಿಯಿಂದ ಆಗಮಿಸಿದ ಇಬ್ಬರು ವೈದ್ಯರು ಜೊಯಿಡಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಳಗೇರಿ ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಿದರು. ಅಗತ್ಯ ಔಷಧಗಳನ್ನು ವಿತರಿಸಿದರು. ಅಲ್ಲದೇ ಬಾಕಿ ಔಷಧಗಳನ್ನೂ ಅಗತ್ಯ ಬಿದ್ದಾಗ ಪೂರೈಸುವ ಭರವಸೆ ನೀಡಿದರು.
ಆರೋಗ್ಯ ತಪಾಸಣೆ:
ಸ್ಪಂದಿಸಿದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಜೊಯಿಡಾ ತಹಸೀಲ್ದಾರ್ ಮಂಜುನಾಥ ಮುನ್ನಳ್ಳಿ ಹಾಗೂ ಸಿಬ್ಬಂದಿ, ಉಳವಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಮುಕಾಶಿ ಹಾಗೂ ಉಳವಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಶುಕ್ರವಾರ ಸುಳಗೇರಿ ಗ್ರಾಮ ತಲುಪಿದರು. ಗುಡ್ಡದ ಕಾಲು ಹಾದಿಯಲ್ಲಿ ಮಧ್ಯಾಹ್ನ 1 ಗಂಟೆಗೆ ತಲುಪಿದ ಅಧಿಕಾರಿಗಳು ಮಧ್ಯಾಹ್ನ 4.30 ರವರೆಗೂ ಸಭೆ ನಡೆಸಿ, ಜನರ ಸಮಸ್ಯೆಗಳನ್ನು ಆಲಿಸಿದರು. ಶೀಘ್ರ ಸಮಸ್ಯೆರ ಬಗೆಹರಿಸುವ ಭರವಸೆ ನೀಡಿದರು.
ಕಾರವಾರ : ಜೊಯಿಡಾ ತಾಲೂಕಿನ ಸುಳಗೇರಿ ಗ್ರಾಮಕ್ಕೆ ಕೊನೆಗೂ ಅಧಿಕಾರಿಗಳು ದೌಡಾಯಿಸಿದ್ದಾರೆ. ಕುಗ್ರಾಮದ ವಿವಿಧ ಸಮಸ್ಯೆಯ ಕುರಿತು `ವಿಜಯವಾಣಿ' ನಿರಂತರವಾಗಿ ವರದಿ ಪ್ರಕಟಿಸಿತ್ತು. ಸಾಕಷ್ಟು ಸಮಸ್ಯೆ ಇದ್ದರೂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸದ ಬಗ್ಗೆ, ಅವರ ಗೋಳು ಆಲಿಸದ ಬಗ್ಗೆ ಧ್ವನಿ ಎತ್ತಿತ್ತು.
ಮೊದಲ ಬಾರಿ ತಹಸೀಲ್ದಾರ್ ಭೇಟಿ ಸುಳಗೇರಿ ಗ್ರಾಮದಲ್ಲಿ ಸರ್ಕಾರಿ ಯೋಜನೆಗಳು ಬಂದು ತಲುಪುವುದೇ ಅಪರೂಪ. ಅಧಿಕಾರಿಗಳಂತೂ ಇಲ್ಲಿಗೆ ಬಂದಿದ್ದೇ ಇಲ್ಲ. ಬಹಳ ವರ್ಷಗಳ ಬಳಿಕ ತಹಸೀಲ್ದಾರ್ ನಮ್ಮ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಸಮಸ್ಯೆ ಆಲಿಸಿದ್ದಾರೆ. ಇದಕ್ಕೆ `ವಿಜಯವಾಣಿ' ಪತ್ರಿಕೆ ಕಾರಣವಾಗಿದೆ. ಪತ್ರಿಕಾ ತಂಡಕ್ಕೆ ಧನ್ಯವಾದಗಳು ಎಂದು ಗ್ರಾಮಸ್ಥರು ಹೇಳಿದ್ದಾರೆ. ಕಾರವಾರ ತಾಲೂಕಿಗೆ ಸೇರಿಸುವಂತೆ ಮನವಿ ಸುಳಗೇರಿ ಗ್ರಾಮವನ್ನು ಸಂಪೂರ್ಣವಾಗಿ ಕಾರವಾರ ತಾಲೂಕಿಗೆ ಸೇರಿಸಬೇಕು ಎಂದು ಗ್ರಾಮಸ್ಥರು ಶುಕ್ರವಾರ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಗ್ರಾಮವು ಕಂದಾಯ ನಕ್ಷೆಯಲ್ಲಿ ಜೊಯಿಡಾ ತಾಲೂಕಿನ ಉಳವಿ ಗ್ರಾಪಂಗೆ ಸೇರಿದೆ.ಹಾಗಾಗಿ ಕಂದಾಯ ಇಲಾಖೆಯ ಕಾಗದಪತ್ರ ವ್ಯವಹಾರಗಳಿಗೆ, ಜೊಯಿಡಾ, ಕುಂಬಾರವಾಡಕ್ಕೆ ತೆರಳಬೇಕು. ರೇಶನ್‌ಗೆ ಉಳವಿಗೆ ತೆರಳಬೇಕಿದೆ. ಉಳವಿಗೆ 68 80 ಕಿಮೀಗೂ ಹೆಚ್ಚು .ಜೊಯಿಡಾಕ್ಕೆ 78 ಕಿಮೀ ದೂರ ಸಾಗಬೇಕಿದೆ. ಶಾಲೆ ಯಲ್ಲಾಪುರ ತಾಲೂಕಿಗೆ ಸೇರಿದೆ. ಯಲ್ಲಾಪುರ ತಾಲೂಕಿನ ಮಲವಳ್ಳಿ ಅಂಚೆ ಕಚೇರಿಯ ವ್ಯಾಪ್ತಿಗೆ ಸುಳಗೇರಿ ಸೇರಿದೆ. ಆದರೆ, ಅಲ್ಲಿಗೂ ವಾಹನ ತೆರಳುವ ರಸ್ತೆ ಇಲ್ಲ. ಕಾಡಿನ ಹಾದಿಲ್ಲಿ 9 ಕಿಮೀ ನಡೆದು, ಎರಡು ಹೊಳೆಗಳನ್ನು ದಾಟಿ ಸಾಗಬೇಕಿದೆ. ವಿದ್ಯುತ್ ಹಾಗೂ ರಸ್ತೆ ಸಂಪರ್ಕ ಕಾರವಾರ ತಾಲೂಕಿನಿಂದ ಇದೆ. ಹಾಗೂ ದೈನಂದಿನ ವ್ಯವಹಾರಗಳಿಗೆ ನಾವು ಕಾರವಾರವನ್ನು ನೆಚ್ಚಿಕೊಂಡಿದ್ದೇವೆ. ಅತಂತ್ರವಾಗಿದ್ದರಿಂದ ಗ್ರಾಮದಲ್ಲಿ ಹಲವು ಸಮಸ್ಯೆಗಳಿವೆ. ಇದರಿಂದ ಗ್ರಾಮದ ಎಲ್ಲ ವ್ಯವಹಾರಗಳನ್ನು ಕಾರವಾರ ತಾಲೂಕಿಗೆ ಸೇರಿಸಬೇಕು ಎಂದು ಅವರು ಅರ್ಜಿ ಸಲ್ಲಿಸಿದ್ದಾರೆ.
ಜೊಯಿಡಾ ತಹಸೀಲ್ದಾರ್
ಮಂಜುನಾಥ ಮುನ್ನಳ್ಳಿ
ಸುಳಗೇರಿ ಗ್ರಾಮಕ್ಕೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದ್ದೇನೆ. ಗ್ರಾಮಸ್ಥರೆಲ್ಲರ ಆರೋಗ್ಯ ತಪಾಸಣೆ ಮಾಡಿಸಲಾಗಿದೆ. ಕೇಬಲ್ ಅಳವಡಿಸಿ ವಾರದಲ್ಲಿ ವಿದ್ಯುತ್ ಪೂರೈಕೆಗೆ ಕ್ರಮ ವಹಿಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ತುರ್ತು ಸಂದರ್ಭದಲ್ಲಿ ಸುಳಗೇರಿ ಗ್ರಾಮಸ್ಥರ ಓಡಾಕ್ಕೆ ಕೆಪಿಸಿಯ ಒಂದು ಜೀಪ್ ಬಳಕೆಗೆ ಅವಕಾಶ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.
............
ಉಳವಿ ಗ್ರಾಪಂ ಅಧ್ಯಕ್ಷಮಂಜುನಾಥ ಮುಕಾಶಿಸುಳಗೇರಿ ಗ್ರಾಮಸ್ಥರ ಎಲ್ಲ ಸಮಸ್ಯೆಗಳನ್ನು ಆಲಿಸಿ ಪಟ್ಟಿ ಮಾಡಲಾಗಿದೆ. ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರೂ, ಶಾಸಕರೂ ಆದ ಆರ್.ವಿ.ದೇಶಪಾಂಡೆ ಅವರ ಸಹಕಾರ, ಮಾರ್ಗದರ್ಶನ ಪಡೆದು ಸಮಸ್ಯೆ ಬಗೆಹರಿಸಲು ಕ್ರಮ ವಹಿಸಲಾಗುವುದು.