

ವಿಚಿತ್ರ ಎಂದರೆ ವಿದ್ಯುತ್ ಉತ್ಪಾದನೆ ಮಾಡುವವರಿಗೂ ವಿದ್ಯುತ್ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಕೊಡಸಳ್ಳಿ ವಿದ್ಯುದಾಗಾರದಲ್ಲಿ ಕೆಪಿಸಿ ವಿದ್ಯುತ್ ಉತ್ಪಾದನೆ ಮಾಡಿ ರಾಜ್ಯದ ಗ್ರಿಡ್‌ಗೆ ಪೂರೈಸಲಾಗುತ್ತದೆ. ಆದರೆ, 20 ದಿನಗಳಿಂದ ಆ ವಿದ್ಯುದಾಗಾರಕ್ಕೂ ವಿದ್ಯುತ್ ಇಲ್ಲ. ಅಲ್ಲಿ ಉತ್ಪಾದನೆಯಾಗುವ ವಿದ್ಯುತ್‌ನ್ನು ಟ್ರಾನ್ಸ್ಫರ್ಮರ್ ಇಲ್ಲದೇ ನೇರವಾಗಿ ಬೆಳಕು, ಫ್ಯಾನ್ ಮುಂತಾದವಕ್ಕೆ ಬಳಸಲು ಬರುವುದಿಲ್ಲ. ಇದರಿಂದ ಜನರೇಟರ್ ಇಟ್ಟುಕೊಂಡು ಸ್ಥಳೀಯ ಅಗತ್ಯಗಳನ್ನು ಪೂರೈಸಲಾಗುತ್ತಿದೆ. ಈಗ ರಸ್ತೆ ಬಂದಾಗಿದ್ದರಿAದ ಜನರೇಟರ್‌ಗೆ ಇಂಧನ ಪೂರೈಕೆಗೂ ಸಮಸ್ಯೆ ಉಂಟಾಗಿದೆ ಎನ್ನುತ್ತಾರೆ ಕೆಪಿಸಿ ಇಂಜಿನಿಯರ್ ಒಬ್ಬರು.ವಿದ್ಯುತ್ ಉತ್ಪಾದಿಸುವವರಿಗೂ ಇಲ್ಲ ಬೆಳಕುಸೀಮೆ ಎಣ್ಣೆಯೂ ಸಿಗುತ್ತಿಲ್ಲ. ಇದರಿಂದ ನಾವು ಕತ್ತಲಾಗುವುದಕ್ಕೂ ಮುಂಚೇ ಊಟ ಮಾಡಿ ಮಲಗಬೇಕಿದೆ. ಮಕ್ಕಳು ಬೆಳಗಿನ ಹೊತ್ತಿನಲ್ಲಿ ಶಾಲೆಯಲ್ಲಿ ಮಾತ್ರ ಓದಬೇಕಾಗಿದೆ. ನಾವು ಕೆಲವರು ಕೊಡಸಳ್ಳಿ ಅಣೆಕಟ್ಟೆಗೆ ಉದ್ಯೋಗಕ್ಕೆ ಹೋಗುತ್ತೇವೆ. ಅಲ್ಲಿ ಮೊಬೈಲ್ ಅಥವಾ ಬ್ಯಾಟರಿ ಚಾರ್ಜ್ ಮಾಡಿ ತರುತ್ತೇವೆ. ಅಂಥವರ ಮನೆಗಳಿಗಷ್ಠ ರಾತ್ರಿ ಬೆಳಕು ಎನ್ನುತ್ತಾರೆ ಗ್ರಾಮಸ್ಥ ಸುಜಿತ್. ಕೊಡಸಳ್ಳಿ ಅಣೆಕಟ್ಟೆಯಲ್ಲಿ ಜನರೇಟರ್ ವ್ಯವಸ್ಥೆ ಇದೆ. ಆದರೆ, ಊರವರ ಪರಿಸ್ಥಿತಿ ಕೇಳುವವರಿಲ್ಲವಾಗಿದೆ.ಗುಡ್ಡ ಕುಸಿಯುವುದಕ್ಕೂ ಮುಂಚೆ 14 ದಿನಗಳಿಂದ ಸುಳಗೇರಿ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. 3 ಕಂಬಗಳು ಬಿದ್ದಿದ್ದು, ಅವುಗಳನ್ನು ರಿಪೇರಿ ಮಾಡಲು ಹೆಸ್ಕಾಂ ನಿರ್ಲಕ್ಷಯ ವಹಿಸಿದೆ. ಈಗ ಗುಡ್ಡ ಕುಸಿದು ಮತ್ತೆರಡು ಕಂಬಗಳಿಗೆ ಹಾನಿಯಾಗಿದೆ. ಬೆಳಕು ಕಾಣುವುದು ಇನ್ನೆಷ್ಟು ದಿನಕ್ಕೋ ಎಂಬ ದುಖಃ ಸುಳಗೇರಿ ಗ್ರಾಮಸ್ಥರದ್ದು.20 ದಿನಗಳಿಂದ ವಿದ್ಯುತ್ ಇಲ್ಲಗುಡ್ಡ ಕುಸಿತದಿಂದ ಕೆಲವು ವಿದ್ಯಾರ್ಥಿಗಳು ಗ್ರಾಮದಲ್ಲಿ ಸಿಲುಕಿಕೊಂಡಿದ್ದಾರೆ. ಹೈಸ್ಕೂಲ್ ವಿದ್ಯಾರ್ಥಿನಿಯೊಬ್ಬಳ ಹಾಸ್ಟೆಲ್ ಸೇರ್ಪಡೆ ಕೌನ್ಸೆಲಿಂಗ್ ಸೋಮವಾರ ಇತ್ತು ಎಂಬ ಸುದ್ದಿ ಇತ್ತು. ಆದರೆ, ಹೋಗಲು ಆಗಲೇ ಇಲ್ಲ ಎಂದು ವಿದ್ಯಾರ್ಥಿನಿ ಕಣ್ಣೀರು ಹಾಕಿದ್ದಾಳೆ. ಸಾನಿಯಾ ಎಂಬ ವಿದ್ಯಾರ್ಥಿನಿ ಉಳಗಾ ಮಹಾಸತಿ ಕಾಲೇಜ್‌ನಲ್ಲಿ ಪದವಿ ಓದುತ್ತಿದ್ದಾರೆ. ಅವರ ಸೆಮಿಸ್ಟರ್ ಪರೀಕ್ಷೆ ನಡೆಯುತ್ತಿದೆ. ಊರಿಂದ ಬಾಡಿಗೆ ಬೈಕ್ ಮಾಡಿಕೊಂಡು ಗುಡ್ಡ ಕುಸಿತದ ಸ್ಥಳದವರೆಗೆ ಬಂದು ನಂತರ ಅಲ್ಲಿಂದ ನಡೆದು ಗುಡ್ಡ ದಾಟಿ ಮತ್ತೆ ಬಾಡಿಗೆ ವಾಹನದ ಮೂಲಕ ಕದ್ರಾ ತಲುಪಿ ನಂತರ ಬಸ್‌ನಲ್ಲಿ ಕಾಲೇಜ್ ತಲುಪುತ್ತಿದ್ದಾರೆ. ಇನ್ನು ಕೆಲವು ವಿದ್ಯಾರ್ಥಿಗಳು ಬಾಡಿಗೆ ರೂಂ ಮಾಡಿಕೊಂಡು, ಸಂಬಂಧಿಕರ ಮನೆಯಲ್ಲಿ ಇದ್ದು ಓದುತ್ತಿದ್ದಾರೆ. ಅವರಿಗೆ ಊರು ತಲುಪುವ ಪರಿಸ್ಥಿತಿ ಇಲ್ಲ.ಕೌನ್ಸೆಲಿಂಗ್ ತಪ್ಪಿತುಗ್ರಾಮದಲ್ಲಿ ನಾಲ್ಕೈದು ವೃದ್ಧರು ಅನಾರೋಗ್ಯ ಸ್ಥಿತಿಯಲ್ಲಿದ್ದಾರೆ. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲೂ ಸಮಸ್ಯೆಯಾಗಿದೆ. ಆಡಳಿತದವರನ್ನು ಕೇಳಿದರೆ, ಆಸ್ಪತ್ರೆಗೆ ಸೇರಿಸೋಣ ಎನ್ನುತ್ತಾರೆ. ಆಸ್ಪತ್ರೆಗೆ ಸೇರಿಸಿ ಬಂದರೆ ಅವರನ್ನು ಅಲ್ಲಿ ನೋಡಿಕೊಳ್ಳುವವರು ಯಾರು ಎಂಬ ಪ್ರಶ್ನೆ ಗ್ರಾಮಸ್ಥರದ್ದು.ಗ್ರಾಮದಿಂದ ಗುಡ್ಡ ಕುಸಿತದ ಸ್ಥಳ ಸುಮಾರು 18 ಕಿಮೀ ಇದೆ. ಗ್ರಾಮಸ್ಥರು ನಡೆದು ಬರಬೇಕು ಇಲ್ಲವೇ. ಬೈಕ್ ಮೂಲಕ ಬರಬೇಕು. ಗ್ರಾಮದಲ್ಲಿ ಏಳೆಂಟು ಬೈಕ್‌ಗಳು ಮಾತ್ರ ಇವೆ. ಎಲ್ಲ 35 ಕುಟುಂಬಗಳೂ ಅದೇ ಬೈಕ್‌ಗಳನ್ನು ನೆಚ್ಚಿಕೊಂಡಿವೆ. ಬೈಕ್‌ಗೆ ಪೆಟ್ರೊಲ್ ಖಾಲಿಯಾದರೆ ತಕ್ಷಣ ತರುವ ಪರಿಸ್ಥಿತಿ ಕೂಡ ಇಲ್ಲ. ಇನ್ನು ಗುಡ್ಡದ ಈಚೆ ದಾಟಿ ಬಂದ ನಂತರವೂ ಕದ್ರಾಕ್ಕೆ ತೆರಳಲು ವಾಹನ ಸಿಗುತ್ತಿಲ್ಲ ಎನ್ನುತ್ತಾರೆ ಗ್ರಾಮಸ್ಥ ನಾಗರಾಜ ನಾಯ್ಕ.ಕದ್ರಾದಿಂದ 30 ಕಿಮೀ ದೂರದಲ್ಲಿ ಸುಳಗೇರಿಗ್ರಾಮವಿದೆ.ಅಲ್ಲಿನ ಜನ ಒಂದು ಬೆಂಕಿ ಪೆಟ್ಟಿಗೆ ಬೇಕು ಎಂದರೂ ಕದ್ರಾಕ್ಕೆ ಬರುತ್ತಿದ್ದರು. ಹಿಂದೆ ಗ್ರಾಮಕ್ಕೆ ಬರುತ್ತಿದ್ದ ಎನ್‌ಡಬ್ಲುಕೆಆರ್‌ಟಿಸಿ ಬಸ್ ಕೂಡ ಕುಸಿತದ ನಂತದ ಗ್ರಾಮದಲ್ಲೇ ಸಿಲುಕಿದೆ. ದರಿಂದ ಗ್ರಾಮಸ್ಥರಿಗೆ ನಿತ್ಯದ ಅಗತ್ಯ ವಸ್ತುಗಳಿಗೂ ಸಮಸ್ಯೆಯಾಗಿದೆ. ಗ್ರಾಮಸ್ಥರು ಕದ್ರಾ ತಲುಪಲು ಸಾಕಷ್ಟು ಹಣ ವ್ಯಯಿಸಬೇಕಾಗಿದೆ.ಜೂನ್ 2 ರ ರಾತ್ರಿ ಕದ್ರಾದಿಂದ 12 ಕಿಮೀ ದೂರದಲ್ಲಿ ಗುಡ್ಡ ಕುಸಿತ ಉಂಟಾಗಿತ್ತು. ಇದರಿಂದ ಕೊಡಸಳ್ಳಿ ಅಣೆಕಟ್ಟೆ ಹಾಗೂ ಆಚೆಯ ಎರಡು ಗ್ರಾಮಗಳಿಗೆ ತೆರಳುವ ಸಂಪರ್ಕ ಕಡಿತವಾಗಿದೆ. ಕುಸಿತದ ಸ್ಥಳದ ಸಮೀಪ ಕಾಲು ಸಂಕ ವ್ಯವಸ್ಥೆ ಮಾಡಿ, ಕುಸಿದ ಗುಡ್ಡ ದಾಟಲು ಅನುವು ಮಾಡಿಕೊಡಲಾಗಿದೆ. ಕೊಡಸಳ್ಳಿ ಅಣೆ ಕಟ್ಟೆಗೆ ತೆರಳುವ ಕೆಪಿಸಿ ಸಿಬ್ಬಂದಿಯನ್ನು ಕದ್ರಾದಿಂದ ಬಸ್ ಮೂಲಕ ಕರೆತಂದು ಬಿಡಲಾಗುತ್ತದೆ. ಅವರು ನಡೆದು ಕುಸಿದ ಗುಡ್ಡ ದಾಟಿದ ನಂತರ ಅತ್ತ ಕಡೆಯಿಂದ ಕರೆದೊಯ್ಯಲು ಜೀಪ್ ಬರುತ್ತಿವೆ. ಆದರೆ, ಸುಳಗೇರಿ, ಬಾಳೆಮನೆ ಗ್ರಾಮಗಳ ಸುಮಾರು 89 ಜನರ ಓಡಾಟಕ್ಕೆ ವ್ಯವಸ್ಥೆ ಇಲ್ಲ.ಕಾರವಾರ: ಕದ್ರಾ-ಕೊಡಸಳ್ಳಿ ನಡುವೆ ಗುಡ್ಡ ಕುಸಿತವಾಗಿ ಐದು ದಿನ ಕಳೆದಿದೆ. ಇನ್ನಷ್ಟು ಕುಸಿಯುವ ಸಾಧ್ಯತೆಯ ಬಗ್ಗೆ ಭೂ ವಿಜ್ಞಾನಿಗಳು ವರದಿ ನೀಡುವುದರಿಂದ ರಸ್ತೆಯಲ್ಲಿ ಬಿದ್ದ ಮಣ್ಣು ತೆರವು ಮಾಡುವ ಪ್ರಕ್ರಿಯೆ ಇನ್ನೂ ಶುರುವಾಗಿಲ್ಲ. ಇದರಿಂದ ಗುಡ್ಡದ ಆಚೆ ಇರುವ ಗ್ರಾಮಗಳ 35 ಕ್ಕೂ ಅಧಿಕ ಕುಟುಂಬಗಳ ಗೋಳು ಹೇಳ ತೀರದಾಗಿದೆ. ಏನೇನು ಸಮಸ್ಯೆ *ಸುಳಗೇರಿ ರಾತ್ರಿ ಹಾಲ್ಟಿಂಗ್ ಕೆಎಸ್‌ಆರ್‌ಟಿಸಿ ಬಸ್ ಐದು ದಿನಗಳಿಂದ ಆಚೆಯೇ ಸಿಲುಕಿಕೊಂಡಿದೆ. ಚಾಲಕ ನಿರ್ವಾಹಕರು ಎರಡು ದಿನದ ನಂತರ ಊರು ಸೇರಿದ್ದಾರೆ. *ವಾರದಲ್ಲಿ ಎರಡು ದಿನ ಊರಿಗೆ ಹೋಗಿ ಬರುತ್ತಿದ್ದ ಶಾಲೆಯ ಶಿಕ್ಷಕರು ಈಗ ಸುಳಗೇರಿಯ ಕಾಯಂ ನಿವಾಸಿಯಾಗಿದ್ದಾರೆ. ಅವರು ಊರು ಸೇರುವ ಪರಿಸ್ಥಿತಿ ಇಲ್ಲ. *ಸುಳಗೇರಿಯಲ್ಲಿರುವ ಕೆಲವೇ ಕೆಲವು ಬೈಕ್‌ಗಳ ಪೆಟ್ರೋಲ್ ಖಾಲಿಯಾಗಿ ನಿಂತಿವೆ. ಮೊಬೈಲ್‌ಗಳಿಗೆ ಚಾರ್ಜ್ ಮಾಡಲೂ ವಿದ್ಯುತ್ ಇಲ್ಲವಾಗಿದೆ.
......