ಸುಖಮುನಿ ತಾತನ ಜಾತ್ರೆ 26ಕ್ಕೆ

Published on

ಯಲಬುರ್ಗಾ: ತಾಲೂಕಿನ ಚಿಕ್ಕ ಮನ್ನಾಪೂರು ಗ್ರಾಮದ ಶ್ರೀ ಕಾಶಿವಿಶ್ವನಾಥ ಹಾಗೂ ಸುಖಮುನಿ ತಾತನ ಜಾತ್ರೋತ್ಸವ ಫೆ.26 ರಂದು ಜರುಗಲಿದೆ. ಬೆಳಗ್ಗೆ ತಾತನಿಗೆ ವಿಶೇಷ ಪೂಜೆ, ಪಂಚಾಮೃತ ಅಭಿಷೇಕ ನೆರವೇರಲಿದೆ.

25ರಂದು ಮಹಿಳೆಯರ ಕುಂಭ ಮೆರವಣಿಗೆ, ಸಂಜೆ ಸಾಮೂಹಿಕ ವಿವಾಹ ಹಾಗೂ ರಥೋತ್ಸವ ಜರುಗಲಿದೆ. ಪಕ್ಕದ ಗುಳೆ ಗ್ರಾಮದಿಂದ ತೇರಿನ ಹಗ್ಗ, ವಜನಬಾವಿ ಗ್ರಾಮದಿಂದ ಹೂಮಾಲೆ ತರಲಾಗುತ್ತದೆ. 26ಕ್ಕೆ ರಾತ್ರಿ 10ಕ್ಕೆ ಭಾರತೀಯ ಬ್ರಿಟಿಷ್ ಅರ್ಥಾತ್ ರೌಡಿ ಎಂಎಲ್‌ಎ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net