ಕನ್ನಡ ಕಾವ್ಯ ಪರಂಪರೆಯಲ್ಲಿ ಸಂಕಲನ ಗುಣ

udp-14-book
Published on

ಉಡುಪಿ: ಇತ್ತೀಚಿನ ದಿನಗಳಲ್ಲಿ ಬಿಡುಗಡೆಯಾಗುವ ಪುಸ್ತಕಗಳು ಕವಿತೆಗಳ ಸಂಗ್ರಹವಾಗುತ್ತಿದ್ದು, ಪೂರ್ತಿ ಪುಸ್ತಕವು ಕವಿಯ ಅನುಸಂಧಾನವನ್ನು ಪ್ರತಿಫಲಿಸುತ್ತಿಲ್ಲ. ಹೀಗಾಗಿ ಅದು ಕವನ ಸಂಕಲನವಾಗುವುದಿಲ್ಲ. ಆದರೆ ಹಿಂದಿನ ಕಾಲದ ಕವಿಗಳಲ್ಲಿ ಹಾಗೂ ಕನ್ನಡ ಕಾವ್ಯ ಪರಂಪರೆಯಲ್ಲಿ ಸಂಕಲನ ಗುಣವಿದೆ ಎಂದು ಮಾಹೆ ಪ್ರಾಧ್ಯಾಪಕ ಪ್ರೊ.ಕೆ. ಫಣಿರಾಜ್ ಹೇಳಿದರು.

ಭಾನುವಾರ ಸುಹಾಸಂ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಸುಕನ್ಯಾ ಕಳಸ ಅವರ ‘ಮಗಳು ಶಾಲೆಗೆ ಹೋಗಿದ್ದಾಳೆ’ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು. ಸರಕು ಸಂಸ್ಕೃತಿಯ ಕಾಲಘಟ್ಟದಲ್ಲಿ ಕಥೆ, ಕವನ, ಹಾಡು ಎಲ್ಲವೂ ಮಾರಾಟದ ವಸ್ತುವಾಗುತ್ತಿವೆ. ದೇಶೀಯ ಭಾಷೆಯ ಸಾಹಿತ್ಯಗಳಲ್ಲಿ ರೋಮ್ಯಾಂಟಿಕ್ ಕಾವ್ಯಗಳು ಕಳೆದುಹೋಗುತ್ತಿರುವ ಸಂದರ್ಭದಲ್ಲಿ ಮಹಿಳಾ ಕವಿಗಳು ರೋಮ್ಯಾಂಟಿಕ್ ವಿಚಾರ ಕಲ್ಪನೆಗೆ ಹೊರಳುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಹೇಳಿದರು.

ಸುಹಾಸಂ ಅಧ್ಯಕ್ಷ ಎಚ್. ಶಾಂತರಾಜ ಐತಾಳ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲ ಡಾ. ಮಹಾಬಲೇಶ್ವರ ರಾವ್ ಪುಸ್ತಕ ಪರಿಚಯ ಮಾಡಿದರು. ಸುಕನ್ಯಾ ಕಳಸ ಕವನ ವಾಚಿಸಿದರು. ಶ್ರೀನಿವಾಸ ಉಪಾಧ್ಯ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net