ಸುಜಯೀಂದ್ರಗೆ ಅಲೆವೂರಾಯ ಪ್ರತಿಷ್ಠಾನ ಗೌರವ

prashasti pradana
ಸುಜಯೀಂದ್ರ ಹಂದೆ ಅವರಿಗೆ ಗೌರವ ಪ್ರಶಸ್ತಿ ಪ್ರದಾನಿಸಲಾಯಿತು.
Published on

ಕೋಟ: ಅಲೆವೂರಾಯ ಪ್ರತಿಷ್ಠಾನ ವತಿಯಿಂದ ಶನಿವಾರ ಮಂಗಳೂರಿನ ಮಂಗಳಾದೇವಿ ದೇವಳದ ರಾಜಾಂಗಣದಲ್ಲಿ ಆಯೋಜಿದ್ದ ಯಕ್ಷ ತ್ರೀವೇಣಿ ಕಾರ್ಯಕ್ರಮದಲ್ಲಿ ಸಾಲಿಗ್ರಾಮ ಮಕ್ಕಳ ಮೇಳದ ನಿರ್ದೇಶಕ ಎಚ್.ಸುಜಯೀಂದ್ರ ಹಂದೆ ಅವರಿಗೆ ಗೌರವ ಪ್ರಶಸ್ತಿ ಪ್ರದಾನಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಮಂಗಳಾದೇವಿ ದೇವಳ ಪ್ರಧಾನ ಮೊಕ್ತೇಸರ ಅರುಣ್ ಐತಾಳ್, ಉಪನ್ಯಾಸಕ ಬಾಲಕೃಷ್ಣ ಶೆಟ್ಟಿ, ಸಾಹಿತಿ ಜನಾರ್ದನ ಹಂದೆ, ಮಾಂಬಾಡಿ ವೇಣುಗೋಪಾಲ, ಮಧು ಅಲೆವೂರಾಯ ಉಪಸ್ಥಿತರಿದ್ದರು. ವರ್ಕಾಡಿ ರವಿ ಸ್ವಾಗತಿಸಿದರು. ಸುಧಾಕರ ಪೇಜಾವರ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net