ಮಾಧ್ಯಮ ವಿರುದ್ಧ ಸುಜಾತಾ ಭಟ್ ಆಕ್ರೋಶ

New Project (39)
Published on

ಬೆಳ್ತಂಗಡಿ: ಸುಳ್ಳು ಕತೆ ಸೃಷ್ಟಿಸಿ ಯಾಮಾರಿಸಿದ್ದ ಸುಜಾತಾ ಭಟ್ ಉಜಿರೆಯಲ್ಲಿ ಗುರುವಾರ ಮಾಧ್ಯಮದವರ ಮೇಲೆ ತೀವ್ರವಾಗಿ ಆಕ್ರೋಶಗೊಂಡಿದ್ದಾರೆ. ನನಗೆ ನಿಮ್ಮಲ್ಲಿ ಮಾತನಾಡುವ ಅಗತ್ಯ ಇಲ್ಲ. ಯಾಕೆ ನನ್ನನ್ನು ಅನುಸರಿಸಿಕೊಂಡು ಬರುತ್ತಿದ್ದೀರಾ? ನಿಮ್ಮಿಂದಾಗಿ ನನ್ನನ್ನು ಜೀವನ ಪರ್ಯಂತ ಸಾಯುವ ಹಾಗೆ ಮಾಡಿದ್ದೀರಿ. ನನ್ನ ವಿಚಾರ ನಿಮಗೆ ಯಾತಕ್ಕೆ ಬೇಕು? ಸಾರ್ವಜನಿಕರಿಗೆ ನಾನು ಉತ್ತರ ಕೊಡಬೇಕಾಗಿಲ್ಲ. ನಾನು ಎಲ್ಲಿ ಉತ್ತರ ಕೊಡಬೇಕು ಅಲ್ಲಿ ಕೊಡುತ್ತೇನೆ. ನಿಮ್ಮಂತಹ ಖಚಡಾ ಮೀಡಿಯಾಕ್ಕಿಂತ ನಾನು ನೇಣು ಹಾಕಿಕೊಂಡು ಸಾಯುತ್ತೇನೆ. ನೀವೆಲ್ಲ ವ್ಯವಸ್ಥಿತ ಕೂಟವನ್ನೇ ಮಾಡಿದ್ದೀರಾ ಎಂದು ಆಕ್ರೋಶಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net