

ಬಾಳೆಹೊನ್ನೂರು: ಭಾರತ ಚುನಾವಣಾ ಆಯೋಗ, ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಇಲಾಖೆ ಆದೇಶದಂತೆ ವಿದ್ಯಾರ್ಥಿಗಳಲ್ಲಿ ಮತದಾನದ ಜಾಗೃತಿ ಮೂಡಿಸಲು ಹಾಗೂ ಚುನಾವಣೆ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಪಟ್ಟಣದ ಎಸ್‌ಜೆಆರ್ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ವಿದ್ಯಾರ್ಥಿ ಸಂಘದ ಚುನಾವಣೆ ನಡೆಸಲಾಯಿತು.
ಕಾಲೇಜಿನ ಮೂರು ಸಂಘಗಳಿಗೆ ಚುನಾವಣೆ ನಡೆದಿದ್ದು, ಮೂರು ಸಂಘಗಳಿಗೆ ತಲಾ ನಾಲ್ಕು ವಿದ್ಯಾರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸುಜನ್, ಸಾಂಸ್ಕೃತಿಕ ಸಂಘದ ಸಂಯೋಜಕರಾಗಿ ಪ್ರಿನ್ಸ್, ಕ್ರೀಡಾ ಸಂಘದ ಸಂಯೋಜಕರಾಗಿ ಮಹಮ್ಮದ್ ತ್ವಾಹಿರ್ ಆಯ್ಕೆಯಾದರು. ಚುನಾವಣೆಯ ಪೋಲಿಂಗ್ ಏಜೆಂಟರಾಗಿ ಕೃತಿಕ್, ಸುಚಿತಾ, ನಿಕಿತಾ ಕಾರ್ಯನಿರ್ವಹಿಸಿದರು.
ಪ್ರಾಚಾರ್ಯ ಕೆ.ಆರ್.ಬೂದೇಶ್ ನೇತೃತ್ವದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಪ್ರಿಸೈಡಿಂಗ್ ಅಧಿಕಾರಿಯಾಗಿ ಕೆ.ಎಂ.ರಾಕೇಶ್, ಫಸ್ಟ್ ಪೋಲಿಂಗ್ ಅಧಿಕಾರಿಯಾಗಿ ಪ್ರಶಾಂತ್‌ಕುಮಾರ್, ಸೆಕೆಂಡ್ ಪೋಲಿಂಗ್ ಅಧಿಕಾರಿಯಾಗಿ ಇಂಚರಾ, ಥರ್ಡ್ ಪೋಲಿಂಗ್ ಅಧಿಕಾರಿಯಾಗಿ ಅರವಿಂದ್ ಕಾರ್ಯನಿರ್ವಹಿಸಿದರು.