ಗ್ಯಾಸ್ ಆನ್​ ಮಾಡಿಟ್ಟು ಸಾಮೂಹಿಕ ಆತ್ಮಹತ್ಯೆಗೆ ಮುಂದಾದ ಕುಟುಂಬ; ಏನೋ ಮಾಡಲು ಹೋಗಿ..

Coorg
Published on

ಕೊಡಗು: ಏನೋ ಮಾಡಲು ಹೋಗಿ ಇನ್ನೇನೋ ಆದಂತಾಗಿದೆ ಇಲ್ಲಿನ ಪರಿಸ್ಥಿತಿ. ನಗರಸಭೆ ಕೌನ್ಸಿಲರ್ ಮತ್ತು ಕಮಿಷನರ್​ ಅವರನ್ನು ವ್ಯಂಗ್ಯವಾಗಿ ಚಿತ್ರಿಸಿ ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿಕೊಂಡಿದ್ದ ಚಿತ್ರಕಲಾವಿದನೊಬ್ಬ ಬಳಿಕ ಪರಿಣಾಮ ಎದುರಿಸಲು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ ಪ್ರಕರಣವೊಂದು ನಡೆದಿದೆ.

ಮಡಿಕೇರಿ ನಗರದ ಚೈನ್ ಗೇಟ್ ಬಳಿಯ ನಿವಾಸಿ, ಚಿತ್ರಕಲಾವಿದ ಸಂದೀಪ್ ನಗರಸಭೆಗೆ ಸೇರಿದ್ದ ಜಾಗದಲ್ಲಿ ಅಕ್ರಮವಾಗಿ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಅಕ್ರಮಸಕ್ರಮ ಅಡಿಯಲ್ಲಿ ಅರ್ಜಿಯನ್ನೂ ಹಾಕಿರುವ ಸಂದೀಪ್, ಕೌನ್ಸಿಲರ್ ಹಾಗೂ ಕಮಿಷನರ್ ಅವರನ್ನು ವ್ಯಂಗ್ಯವಾಗಿ ಚಿತ್ರಿಸಿ ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿದ್ದರು.

ಆ ಬಳಿಕ ಕಮಿಷನರ್ ರಾಮದಾಸ್ ಜೆಸಿಬಿ ತರಿಸಿಕೊಂಡು ಮನೆಯನ್ನು ಕೆಡವಲು ಬಂದಾಗ ಸಂದೀಪ್ ಮತ್ತು ಮನೆಯವರು ಅಡುಗೆ ಅನಿಲದ ಸಿಲಿಂಡರ್ ಆನ್ ಮಾಡಿಟ್ಟು, ಬೆಂಕಿಪೊಟ್ಟಣ ಹಿಡಿದುಕೊಂಡು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಾರೆ. ಸದ್ಯ ಸಂದೀಪ್ ವಿರುದ್ಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net