

ಕೋಟ: ಬಾವಿ ನಿರ್ಮಾಣ ಕಾರ್ಯ ಮಾಡುವ ಗುತ್ತಿಗೆದಾರ ಪಾಂಡೇಶ್ವರದ ನಿವಾಸಿ ಅಬ್ಬಾಸ್ ಎಂಬುವರು ಬ್ರಹ್ಮಾವರ ತಾಲೂಕಿನ ಸಾಸ್ತಾನದ ಪಾಂಡೇಶ್ವರ ಶಾಲೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗುರುವಾರ ಮಧ್ಯಾಹ್ನ ವೇಳೆ ಶಾಲೆ ಆವರಣದಲ್ಲಿಯೇ ಕುಳಿತಿದ್ದ ಅಬ್ಬಾಸ್, ಪರಿಚಯಸ್ಥರಿಗೆ ತನ್ನ ಬಳಿಯಲ್ಲಿದ್ದ ಚೀಟಿ ಹಾಗೂ ಮೊಬೈಲನ್ನು ಮನೆಯವರಿಗೆ ತಲುಪಿಸಲು ಕೊಟ್ಟಿದ್ದರು. ಆ ವ್ಯಕ್ತಿ ಶಾಲೆಯ ಪಕ್ಕದಲ್ಲಿಯೇ ಇರುವ ಅಬ್ಬಾಸ್ ಅವರ ಮನೆಗೆ ತೆರಳಿ ಚೀಟಿ ಮತ್ತು ಮೊಬೈಲ್ ಕೊಟ್ಟು ಬಂದಿದ್ದಾರೆ.
ಆದರೆ ಮನೆಯವರು ಸ್ಥಳಕ್ಕೆ ಬರುವ ಮೊದಲೇ ಅಬ್ಬಾಸ್ ಶಾಲೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರ್ಥಿಕ ಸಂಕಷ್ಟದಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಸ್ಥಳಕ್ಕೆ ಕೋಟ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು.