ಮದುವೆಯಾಗಲು ಕನ್ಯೆ ಸಿಗಲಿಲ್ಲವೆಂದು ಯುವಕ ಆತ್ಮಹತ್ಯೆ

Crime Logo
Published on

ರಾಣೆಬೆನ್ನೂರ: ನಾನು ಇಷ್ಟು ದುಡಿಯುತ್ತಿದ್ದರೂ ಮದುವೆಯಾಗಲು ಯಾರೂ ಕನ್ಯೆ ಕೊಡಲಿಲ್ಲ. ನನ್ನ ವಯಸ್ಸಿನ ಎಲ್ಲರೂ ಮದುವೆಯಾಗಿದ್ದಾರೆ ಎಂದು ಮನನೊಂದು ಕುರಿಗಾಹಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಟನೆ ತಾಲೂಕಿನ ಕೂಸಗೂರ ಗ್ರಾಮದಲ್ಲಿ ನಡೆದಿದೆ.

ಲಿಂಗರಾಜ ಉಮೇಶಪ್ಪ ಗುಡ್ಡದಹಳ್ಳಿ (35) ಮೃತ ವ್ಯಕ್ತಿ.

ಈತ ಆಡು&ಕುರಿ ಕಾಯುವ ಕೆಲಸ ಮಾಡಿಕೊಂಡಿದ್ದ. ಆದರೆ, ಮದುವೆಯಾಗಲು ಯಾರೂ ಕನ್ಯೆ ಕೊಟ್ಟಿರಲಿಲ್ಲ. ಇದರಿಂದ ಬೇಸತ್ತು ಮನೆಯಲ್ಲಿಯೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಕುರಿತು ಹಲಗೇರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net