ಅನಾರೋಗ್ಯದಿಂದ ಹಳ್ಳಿಗಟ್ಟು ನಿವಾಸಿ ಆತ್ಮಹತ್ಯೆ

1706801-suicide-by-hanging
Published on

ಗೋಣಿಕೊಪ್ಪಲು: ಪೊನ್ನಂಪೇಟೆ ತಾಲೂಕಿನ ಹಳ್ಳಿಗಟ್ಟು ಗ್ರಾಮದ ಪ್ರಕೃತಿ ನಗರದಲ್ಲಿ ಶನಿವಾರ ಅನಾರೋಗ್ಯದಿಂದ ಬಳಲುತ್ತಿದ ವ್ಯಕ್ತಿ ಡೆತ್‌ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಲ್ಲಿನ ತೂಚಮಕೇರಿ ಗ್ರಾಮದ ಪೆಮ್ಮಂಡ ಕಾಶಿ (78) ತಮ್ಮ ಮನೆಯ ಮುಂಭಾಗದಲ್ಲಿರುವ ಗೋಡೌನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ ಕಾರಣ ಎರಡು ವರ್ಷದ ಹಿಂದೆಯೇ ತೆರೆದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಲು ಯತ್ನಿಸಿದ್ದರು. ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಬಳಿಕ ಮೃತದೇಹವನ್ನು ಗೋಣಿಕೊಪ್ಪ ಆಸ್ಪತ್ರೆಗೆ ರವಾನಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net