

ಕಾಸರಗೋಡು: ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ ಉದಿನೂರ್ ಇಡಯಿಲಕ್ಕಾಡ್ ನಿವಾಸಿ, ಪ್ಲಸ್‌ಟು ವಿದ್ಯಾರ್ಥಿನಿ ಕೆ.ಮೀರಾ(17) ಎಂಬಾಕೆಯ ಮೃತದೇಹ ಮನೆಯೊಳಗೆ ಕಿಟಕಿ ಸರಳಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಸೌಖ್ಯ ಹಿನ್ನೆಲೆಯಲ್ಲಿ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದೆ ಮನನೊಂದು ಆತ್ಮಹತ್ಯೆಗೆ ಶರಣಾಗಿರಬೇಕೆಂದು ಸಂಶಯಿಸಲಾಗಿದೆ. ಕಳೆದ ರಾಜ್ಯ ಶಾಲಾ ಕಲೋತ್ಸವದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದ ಮೀರಾ ವಿದ್ಯಾಭ್ಯಾಸದಲ್ಲೂ ಮುಂಚೂಣಿಯಲ್ಲಿದ್ದರೆನ್ನಲಾಗಿದೆ. ಚಂದೇರ ಠಾಣೆಯಲ್ಲಿ ಕೇಸು ದಾಖಲಾಗಿದೆ.