ರೈಲಿನಡಿ ಬಿದ್ದು ಯುವಕ ಆತ್ಮಹತ್ಯೆ

Suicide
Published on

ಬಂಟ್ವಾಳ: ಬಿ.ಸಿ.ರೋಡಿನ ರೈಲ್ವೆ ನಿಲ್ದಾಣದಲ್ಲಿ ಗುರುವಾರ ಬೆಳಗ್ಗೆ ರೈಲಿನಡಿ ಬಿದ್ದು ವ್ಯಕ್ತಿಯೊಬ್ಬ ಆತ್ಮಹತ್ಯೆಗೈದಿದ್ದಾನೆ. 11 ಗಂಟೆ ವೇಳೆ ಗೂಡ್ಸ್ ರೈಲು ಬಿ.ಸಿ.ರೋಡಿನ ಬಂಟ್ವಾಳ ರೈಲ್ವೆ ನಿಲ್ದಾಣದಲ್ಲಿ ಸಾಗುವ ವೇಳೆ ಹೆದ್ದಾರಿ ಮೇಲ್ಸೇತುವೆ ಕೆಳಗೆ ವ್ಯಕ್ತಿಯೊಬ್ಬ ಹಳಿಯಲ್ಲಿ ಮಲಗಿದ್ದು, ಆತನ ಮೇಲೆ ರೈಲು ಹಾದು ಹೋಗಿದೆ. ಟನೆಯಿಂದ ದೇಹದ ಮಧ್ಯಭಾಗ ಛಿದ್ರವಾಗಿದೆ. 30ರಿಂದ 35ರ ವಯಸ್ಸಿನ ಈ ವ್ಯಕ್ತಿ ಎಲ್ಲಿಯವನು ಎಂದು ತಿಳಿದುಬಂದಿಲ್ಲ. ಈತನ ಕೈಯಲ್ಲಿ ಹಳೆಯದೊಂದು ಹಚ್ಚೆ ಇದ್ದು, ಅದರಲ್ಲಿ ರಚ್ಚು ಎಂದು ಬರೆದಿದೆ. ರೈಲ್ವೆ ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದು, ಗುರುತು ಪತ್ತೆ ಕಾರ್ಯ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net